Wednesday, November 29, 2023

Latest Posts

ASIAN GAMES| ಪುರುಷರ 10 ಮೀಟರ್ ಏರ್ ಪಿಸ್ತೂಲ್ ಟೀಮ್ ವಿಭಾಗದಲ್ಲಿ ಭಾರತಕ್ಕೆ ಚಿನ್ನ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏಷ್ಯನ್ ಗೇಮ್ಸ್‌ನಲ್ಲಿ ಗುರುವಾರ ನಡೆದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಟೀಮ್ ಈವೆಂಟ್‌ನಲ್ಲಿ ಭಾರತ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಭಾರತ ಒಟ್ಟು 1,734 ಸ್ಕೋರ್‌ನೊಂದಿಗೆ ಚಿನ್ನ ಗೆದ್ದಿತು. ಸರಬ್ಜೋತ್ ಸಿಂಗ್, ಶಿವ ನರ್ವಾಲ್ ಮತ್ತು ಅರ್ಜುನ್ ಸಿಂಗ್ ಚೀಮಾ ತಂಡ ಚೀನಾವನ್ನು ಒಂದು ಅಂಕದಿಂದ ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.

ಏರ್ ಪಿಸ್ತೂಲ್ ತಂಡ ಅದ್ಬುತ ಪ್ರದರ್ಶನದ ಮೂಲಕ ಚೀನಾವನ್ನು ಒಂದು ಅಂಕದಿಂದ ಸೋಲಿಸಿ ತಂಡ ಚಿನ್ನ ಗೆದ್ದುಕೊಂಡಿತು. ವಿಯೆಟ್ನಾಂ ಪ್ರಬಲ ಪ್ರದರ್ಶನ ನೀಡಿ ಒಟ್ಟು 1730 ಅಂಕಗಳೊಂದಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. ವೈಯಕ್ತಿಕ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ 580 ಅಂಕಗಳೊಂದಿಗೆ 5ನೇ ಸ್ಥಾನ ಪಡೆದರೆ, ಅರ್ಜುನ್ ಸಿಂಗ್ ಚೀಮಾ ಒಟ್ಟು 578 ಅಂಕಗಳೊಂದಿಗೆ 8ನೇ ಸ್ಥಾನ ಪಡೆದರು.

ಗುರುವಾರ ಬೆಳಗ್ಗೆ ನಡೆದ ವೈಯಕ್ತಿಕ ಫೈನಲ್‌ನಲ್ಲಿ ಇಬ್ಬರೂ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಶಿವ ನರ್ವಾಲ್ 576 ಸ್ಕೋರ್ ಗಳಿಸಿ 14ನೇ ಸ್ಥಾನ ಪಡೆದು ತಂಡದ ಗೆಲುವಿಗೆ ಕಾರಣರಾದರು. ಒಟ್ಟಿನಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅಥ್ಲೀಟ್ ಗಳು ಪದಕಗಳ ಸುರಿಮಳೆ ಹರಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!