ಪ್ರತೀ ತಿಂಗಳಿನಲ್ಲಿ ಹುಟ್ಟಿದವರಲ್ಲಿಯೂ ವಿಭಿನ್ನವಾದ ಗುಣಗಳಿರುತ್ತವೆ. ಅದೇ ಅವರನ್ನು ಎಲ್ಲರಿಗಿಂತ ಭಿನ್ನ ಎನಿಸುವಂತೆ ಮಾಡುತ್ತವೆ. ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದವರನ್ನು ಅರ್ಥ ಮಾಡಿಕೊಳ್ಳೋಕೆ ಅವರ ಗುಣಗಳನ್ನು ತಿಳಿದುಕೊಳ್ಳೋದು ಮುಖ್ಯ.. ಈ ಎಲ್ಲಾ ಗುಣಗಳಿವೆಯಂತೆ ನೋಡಿ..
- ಮಾತಾಡೋದು ಅಂದ್ರೆ ತುಂಬಾನೆ ಇಷ್ಟ, ಎದುರಿಗಿದ್ದವರಿಗೆ ತಲೆ ನೋವು ಬಂದ್ರೂ ಇವರ ಮಾತು ಮುಗಿಯೋದಿಲ್ಲ.
- ನೋಡೋಕೆ ಸುಂದರವಾಗಿರೋ ಇವರ ಮನಸ್ಸು ಕೂಡ ತುಂಬಾ ಸುಂದರ
- ಮೋಸ ಮಾಡೋ ಬುದ್ಧಿ ಇಲ್ಲ, ನಂಬಿಕೆಗೆ ಅರ್ಹರು
- ಅತಿಯಾದ ಕರುಣೆ ಉಳ್ಳವರು, ತನಗಿಲ್ಲವಾದರೂ ಬೇರೆಯವರಿಗೆ ಕೊಡುವ ಗುಣ
- ಸ್ನೇಹಿತರನ್ನು ಬೇಗ ಮಾಡ್ಕೋತಾರೆ, ತನ್ನ ಗ್ರೂಪ್‌ನಲ್ಲಿ ಫೇಮಸ್
- ಸೆಲೆಬ್ರಿಟಿಗಳಾಗುವ ಸಾಧ್ಯತೆ ಇದೆ
- ಹಗಲುಗನಸು ಕಾಣುತ್ತಾ ಸಮಯ ಕಳೆಯುತ್ತಾರೆ
- ಬೇಗ ಮನಸ್ಸಿಗೆ ನೋವು ಮಾಡಿಕೊಳ್ತಾರೆ, ಆದರೆ ಬೇಗ ಸರಿಯಾಗಿಬಿಡುತ್ತಾರೆ
- ಎಮೋಷನಲ್ ವ್ಯಕ್ತಿಗಳು
- ಹಾಡು, ಕಥೆ, ಟ್ರಾವೆಲ್ ಇಷ್ಟ
- ಮನೆಯಲ್ಲಿ ಕೂರೋಕ್ಕಿಂತ ಹೊರಗೆ ಸುತ್ತೋಕೆ ಇಷ್ಟ
- ಎಲ್ಲರನ್ನೂ ನಗಿಸ್ತಾರೆ
- ಸ್ವಲ್ಪ ಜೆಲಸಿ ಗುಣವಿದೆ
- ಬೇರೆಯವರ ಮಾತುಗಳನ್ನು ಅರ್ಥಮಾಡಿಕೊಳ್ಳೋದ್ರಲ್ಲಿ ಎಡವುತ್ತಾರೆ
- ಸನ್ನೆ ಸೂಕ್ಷ್ಮ ಇವರಿಗಿಲ್ಲ
- ಶ್ರಮಜೀವಿಗಳು, ತಮ್ಮ ಕೆಲಸ ಶ್ರದ್ಧೆಯಿಂದ ಮಾಡ್ತಾರೆ
- ನಿಜ ಹೇಳ್ತಾರೆ, ಸುಳ್ಳು ಹೇಳಿ ಸಿಕ್ಕಿಹಾಕಿಕೊಳ್ಳೋ ಗೋಜಿಗೆ ಹೋಗೋದಿಲ್ಲ
- ಕೆಲವೊಮ್ಮೆ ಸ್ವಾರ್ಥ ತುಂಬಿರುತ್ತದೆ
- ಎಲ್ಲದಕ್ಕೂ ಒಂದು ಒಪಿನಿಯನ್ ಇಟ್ಟಿರುತ್ತಾರೆ
- ಬೇರೆಯವರು ನನ್ನ ಬಗ್ಗೆ ಏನು ಅಂದುಕೊಳ್ತಾರೆ ಅನ್ನೋ ಬಗ್ಗೆ ಇವರಿಗೆ ಕಾಳಜಿ ಇಲ್ಲ