ಲಡಾಖ್‌ನ 388 ನಿವಾಸಿಗಳನ್ನು ಜಮ್ಮುವಿನಿಂದ ಲೇಹ್‌ಗೆ ಸ್ಥಳಾಂತರಿಸಿದ ಭಾರತೀಯ ವಾಯುಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಲಡಾಖ್‌ನ 388 ನಿವಾಸಿಗಳನ್ನು ಜಮ್ಮುವಿನಿಂದ ಲೇಹ್‌ಗೆ ಸ್ಥಳಾಂತರಿಸಲು ಭಾನುವಾರ ಬೆಳಿಗ್ಗೆ ಭಾರತೀಯ ವಾಯುಪಡೆಯು IL-76 ವಿಮಾನವನ್ನು ವ್ಯವಸ್ಥೆ ಮಾಡಲಾಗಿತ್ತು.

ಎರಡು IL-76 ವಿಮಾನಗಳು ನಾಗರಿಕರನ್ನು ಏರ್‌ಲಿಫ್ಟ್ ಮಾಡಲು ಜಮ್ಮುವಿನ ವಾಯುಪಡೆಯ ನಿಲ್ದಾಣಕ್ಕೆ ಬಂದಿದ್ದವು. ಲಡಾಖ್ ನಿವಾಸಿಗಳನ್ನು ಜಮ್ಮುವಿನಿಂದ ವಿಮಾನದಲ್ಲಿ ಏಕೆ ಕರೆತರಲಾಯಿತು ಎಂಬುದರ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

‘ಸದ್ಭಾವನಾ’ ಕಾರ್ಯಾಚರಣೆಯ ಅಡಿಯಲ್ಲಿ, ಭಾರತೀಯ ವಾಯುಪಡೆಯು ಕಾಲಕಾಲಕ್ಕೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಕೇಂದ್ರಾಡಳಿತ ಪ್ರದೇಶಗಳ ನಿವಾಸಿಗಳಿಗೆ ಸಹಾಯವನ್ನು ಮಾಡುತ್ತಾ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!