Thursday, March 23, 2023

Latest Posts

KCC-2023 | ನಟ ಧನಂಜಯ್ ಟೀಮ್ ಚಾಂಪಿಯನ್: ಅಪ್ಪುಗೆ ಕೆಸಿಸಿ ಕಪ್ ಅರ್ಪಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಎರಡು ದಿನಗಳ ಕಾಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕನ್ನಡ ಚಲನಚಿತ್ರ ಕಪ್ ಗೆ ತೆರೆಬಿದ್ದಿದೆ. ನಟಧನಂಜಯ್ ನೇತೃತ್ವದ ಗಂಗಾ ವಾರಿಯಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಗಂಗಾ ವಾರಿಯರ್ಸ್ ಮತ್ತು ರಾಷ್ಟ್ರಕೂಟ ಪ್ಯಾಂಥರ್ಸ್ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಗಂಗಾ ವಾರಿಯರ್ಸ್ ಗೆದ್ದು ಸಂಭ್ರಮಿಸಿದೆ.
ಎರಡು ದಿನಗಳ ಕಾಲ ನಡೆದ ಪಂದ್ಯಗಳಲ್ಲಿ ಆರು ತಂಡಗಳು ಭಾಗಿಯಾಗಿದ್ದು, ತಲಾ ಎರಡು ಪಂದ್ಯಗಳನ್ನು ಆಡಿದವು.

ಧನಂಜಯ್, ಗಣೇಶ್, ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ ಮತ್ತು ಧ್ರುವ ಸರ್ಜಾ ತಲಾ ಒಂದೊಂದು ತಂಡದ ನೇತೃತ್ವವಹಿಸಿದ್ದರು. ಸಿನಿಮಾ ನಟರು ಮತ್ತು ತಂತ್ರಜ್ಞರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಕೂಡ ಕನ್ನಡ ಚಲನಚಿತ್ರ ಕಪ್ ಪಂದ್ಯದಲ್ಲಿ ಭಾಗಿಯಾಗಿದ್ದರು.

ಫೈನಲ್ ತಲುಪಿದ್ದ ಗಂಗಾ ವಾರಿಯರ್ಸ್ ಮತ್ತು ವಿಜಯನಗರ ಪೇಟ್ರಿಯಾಟ್ಸ್ ಅತ್ಯುತ್ತಮವಾಗಿ ಆಡಿದವು. ಕೊನೆಗೂ ಧನಂಜಯ್ ನಾಯಕನಾಗಿದ್ದ ಗಂಗಾ ವಾರಿಯರ್ಸ್ ಚಾಂಪಿಯನ್ ಪಟ್ಟ ಪಡೆದುಕೊಂಡಿತು. ಈ ಗೆಲುವನ್ನು ತಂಡ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!