ಅಮೀರ್‌ರನ್ನು ಬೆಂಬಲಿಸಿದ ವಿಜಯ್‌ ದೇವರಕೊಂಡಗೆ ಸಂಕಷ್ಟ: ಶುರುವಾಯ್ತು ʼಬಾಯ್ಕಾಟ್‌ ಲೈಗರ್‌ʼ ಅಭಿಯಾನ!

ಹೊಸಗಂತ ಡಿಜಿಟಲ್‌ ಡೆಸ್ಕ್
ಪ್ಯಾನ್-ಇಂಡಿಯಾ ಚಿತ್ರ ‘ಲೈಗರ್’ ಬಿಡುಗಡೆಗೆ ಸಿದ್ಧವಾಗಿದೆ. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ಪುರಿ ಕನೆಕ್ಟ್ಸ್ ಮೂಲಕ ಸ್ಪೋರ್ಟ್ಸ್-ಆಕ್ಷನ್ ಡ್ರಾಮಾ ‘ಲೈಗರ್’ ಚಿತ್ರವನ್ನು ನಿರ್ಮಿಸಲಾಗಿದೆ. ತೆಲುಗು ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ ಈ ದೇಶದ ಪ್ರಮುಖ ನಗರಗಳಲ್ಲಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ.
ಇತ್ತೀಚೆಗೆ ‘ಲೈಗರ್’ನ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ವಿಜಯ್ ದೇವರಕೊಂಡ ಅವರು ಅಮೀರ್ ಖಾನ್-ಕರೀನಾ ಕಪೂರ್ ಅವರ ‘ಲಾಲ್ ಸಿಂಗ್ ಚಡ್ಡಾ’ ಕುರಿತಾಗಿ ನೀಡಿದ ಹೇಳಿಕೆ ನೆಟ್ಟಿಗರ ಕಣ್ಣು ಕೆಂಪಾಗಿಸಿದೆ. ಬಾಲಿವುಡ್‌ನಲ್ಲಿ ವೈರಲ್ ಆಗುತ್ತಿರುವ ‘ಲಾಲ್ ಸಿಂಗ್ ಚಡ್ಡಾ’ ಮತ್ತು ಇತರ ಕೆಲವು ಚಿತ್ರಗಳ ಬಹಿಷ್ಕಾರ ಕುರಿತಾದ ಪ್ರವೃತ್ತಿಯ ಬಗ್ಗೆ ಈ ಸಂದರ್ಶನದಲ್ಲಿ ದೇವರಕೊಂಡ ಅವರ ಪ್ರತಿಕ್ರಿಯೆಯನ್ನು ಕೇಳಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ವಿಜಯ್, ಬಾಲಿವುಡ್ ಚಿತ್ರಗಳ ವಿರುದ್ಧದ ಬಹಿಷ್ಕಾರದ ಕರೆ ಕೇವಲ ನಟರ ಮೇಲೆ ಮಾತ್ರವೇ ಪರಿಣಾಮ ಬೀರುವುದಿಲ್ಲ, ಈ ಚಿತ್ರಗಳ ನಿರ್ಮಾಣಕ್ಕಾಗಿ ತಮ್ಮ ರಕ್ತ ಮತ್ತು ಬೆವರು ಹರಿಸಿರುವ ನೂರಾರು ಕಾರ್ಮಿಕರ ಜೀವನದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.

“ಒಂದು ಚಿತ್ರವೆಂದರೆ ಅದರಲ್ಲಿ ಪ್ರಮುಖವಾಗಿ ನಟ- ನಟಿ ಮತ್ತು ನಿರ್ದೇಶಕ ಪ್ರಮುಖವಾಗಿ ಎಲ್ಲರಿಗೂ ಕಾಣಿಸಿಕೊಳ್ಳುತ್ತಾರೆ. ಆದರೆ ತೆರೆಯ ಹಿಂದೆ ಹಲವಾರು ಪಾತ್ರಗಳಿರುತ್ತವೆ. ಚಿತ್ರವೊಂದರಲ್ಲಿ 200-300 ಸಿಬ್ಬಂದಿ ಕೆಲಸ ಮಾಡುತ್ತಿರುತ್ತಾರೆ. ಒಂದು ಚಿತ್ರ ಹಲವಾರು ಜನರಿಗೆ ಉದ್ಯೋಗವನ್ನು ನೀಡುತ್ತದೆ ಮತ್ತು ಅನೇಕರ ಜೀವನೋಪಾಯದ ಮೂಲವಾಗಿದೆ. ಅಮೀರ್ ಖಾನ್ ಸರ್ ಅವರು ಲಾಲ್ ಸಿಂಗ್ ಚಡ್ಡಾದಲ್ಲಿ ನಟಿಸಿದ್ದಾರೆಂದು ನೀವು ಚಲನಚಿತ್ರವನ್ನು ಬಹಿಷ್ಕರಿಸಲು ನಿರ್ಧರಿಸಿದರೆ ಅದರ ಪರಿಣಾಮ ಚಿತ್ರಕ್ಕೆ ದುಡಿದ ಸಾವಿರಾರು ಜನರ ಮೇಲಾಗುತ್ತದೆ ಎಂದು ವಿಜಯ್‌ ದೇವರಕೊಂಡ ಅಭಿಪ್ರಾಯ ಪಟ್ಟಿದ್ದರು.
ಬಾಯ್ಕಾಟ್ ಅಭಿಯಾನದ ಬಗ್ಗೆ ವಿಜಯ್ ಅಭಿಪ್ರಾಯವನ್ನು ಹೊರಬೀಳುತ್ತಿದ್ದಂತೆ ಹಲವಾರು ಜನರು ʼಲೈಗರ್‌ʼ ಬಾಯ್ಕಾಟ್‌ ಸಂದೇಶವನ್ನು ಹಂಚಿಕೊಳ್ಳುತ್ತಿದ್ದಾರೆ.‌

ಬಾಲಿವುಡ್‌ ನಿರ್ಮಾಪಕ ಕರಣ್ ಜೋಹರ್ ಅವರೊಂದಿಗೆ ಸಹಕರಿಸಿದ್ದಕ್ಕಾಗಿ ಹಲವಾರು ನೇಟಿಜನ್‌ಗಳು ‘BoycottLigerMovie’ ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ಮಾಡಲು ಪ್ರಾರಂಭಿಸಿದ್ದಾರೆ. ಮತ್ತು ಲೈಗರ್‌ ಬಹಿಷ್ಕಾರಕ್ಕೆ ಈಗಾಗಲೇ ಚಳುವಳಿ ಆರಂಭಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!