ರಾಜಸ್ಥಾನದ ಜೈಸಲ್ಮೇರ್‌ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಮಾನವರಹಿತ ವಿಮಾನ ಪತನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುರುವಾರ (ಏಪ್ರಿಲ್ 25) ಬೆಳಗ್ಗೆ ರಾಜಸ್ಥಾನದ ಜೈಸಲ್ಮೇರ್‌ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಬೇಹುಗಾರಿಕಾ ವಿಮಾನ ಪತನಗೊಂಡಿದೆ.

ಇದು ಮಾನವ ರಹಿತ ವಿಮಾನವಾಗಿರುವುದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಮೈದಾನದಲ್ಲಿ ವಿಮಾನ ಪತನಗೊಂಡಿದ್ದರಿಂದ ಯಾವುದೇ ಅಪಘಾತ ಸಂಭವಿಸಿಲ್ಲ. ಆದರೆ, ಇಡೀ ವಿಮಾನ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ.

ಜೈಸಲ್ಮೇರ್‌ ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಪಿಥಾಲ ಗ್ರಾಮದ ಬಳಿಯ ಜಮೀನಿನಲ್ಲಿ ವಿಮಾನ ಪತನಗೊಂಡಿದೆ. ಈ ಬಗ್ಗೆ ಸ್ವತಃ ವಾಯುಸೇನೆ ವರದಿ ಮಾಡಿದೆ.

“ಜೈಸಲ್ಮೇರ್‌ ಬಳಿ ಭಾರತೀಯ ವಾಯುಪಡೆಯ ಡ್ರೋನ್ ಪತನಗೊಂಡಿದೆ. ದೈನಂದಿನ ಹಾರಾಟದ ಸಮಯದಲ್ಲಿ ವಿಮಾನವು ಪತನಗೊಂಡಿದೆ. ಅಪಘಾತದ ಪರಿಣಾಮವಾಗಿ ಯಾವುದೇ ಗಾಯಗಳಾಗಿಲ್ಲ. ಯಾವುದೇ ವೈಯಕ್ತಿಕ ಆಸ್ತಿಗೆ ಹಾನಿಯಾಗಿಲ್ಲ. ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!