ಪ್ರತಿಷ್ಠಿತ ಸ್ಪೆಲ್ಲಿಂಗ್ ಬೀ ಪ್ರಶಸ್ತಿ ಗೆದ್ದ ಭಾರತ ಮೂಲದ ಹರಿಣಿ ಲೋಗನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತೀಯ ಮೂಲದ ಟೆಕ್ಸಾಸ್‌ನ 14 ವರ್ಷದ ವಿದ್ಯಾರ್ಥಿನಿ ಹರಿಣಿ ಲೋಗನ್ 22 ಪದಗಳನ್ನು ತಪ್ಪಿಲ್ಲದೆ ಉಚ್ಚರಿಸುವ ಮೂಲಕ ಪ್ರತಿಷ್ಠಿತ 2022 ರ ಸ್ಕ್ರಿಪ್ಸ್ ಸ್ಪೆಲ್ಲಿಂಗ್ ಬೀ ಚಾಂಪಿಯನ್ ಸ್ಪೆಲ್ಲರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ.
ನಾಲ್ಕನೇ ಬಾರಿಗೆ ಸ್ಪೆಲಿಂಗ್ ಬೀ ಯಲ್ಲಿ ಸ್ಪರ್ಧಿಸುತ್ತಿರುವ ಹರಿಣಿ, ಮೇರಿಲ್ಯಾಂಡ್‌ನ ನ್ಯಾಷನಲ್ ಹಾರ್ಬರ್‌ನಲ್ಲಿ ನಡೆದ ಅದ್ದೂರಿ ಸ್ಪರ್ಧಾಕಣದಲ್ಲಿ 90 ಸೆಕೆಂಡ್‌ಗಳ ಕ್ಷಿಪ್ರ ಅವಧಿಯಲ್ಲಿ 21 ಪದಗಳನ್ನು ತಪ್ಪಿಲ್ಲದೆ ಉಚ್ಚರಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಹರಿಣಿಗೆ ತೀವ್ರ ಪ್ರತಿಸ್ಪರ್ಧೆ ಒಡ್ಡಿದ ಮತ್ತೋರ್ವ ಭಾರತ ಮೂಲದ ವಿದ್ಯಾರ್ಥಿ ಕೊಲೊರಾಡೋದ 12 ವರ್ಷದ ವಿಕ್ರಮ್ ರಾಜು, 15 ಪದಗಳನ್ನು ಸರಿಯಾಗಿ ಉಚ್ಚರಿಸಿ ರನ್ನರ್ ಅಪ್‌ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ.

ಟೆಕ್ಸಾಸ್‌ನ ಮೆಕ್‌ಗ್ರೆಗರ್‌ನ 13 ವರ್ಷದ ವಿಹಾನ್ ಸಿಬಲ್ ಮೂರನೇ ಸ್ಥಾನ ಗಳಿಸಿದ್ದರೆ, ಇನ್ನೊಂದು ವರ್ಷದ ಅರ್ಹತೆಯನ್ನು ಸಹ ಹೊಂದಿದ್ದಾರೆ. ವಾಷಿಂಗ್ಟನ್‌ನ ಬೆಲ್ಲೆವ್ಯೂನಿಂದ ಎಂಟನೇ ತರಗತಿಯಲ್ಲಿ ಓದುತ್ತಿರುವ 13 ವರ್ಷದ ಸಹರ್ಶ್ ವುಪ್ಪಲಾ ನಾಲ್ಕನೇ ಸ್ಥಾನ ಪಡೆದರು.
ಹರಿಣಿ ಮಾಜಿ ಸ್ಪೆಲ್ಲರ್ ಗ್ರೇಸ್ ವಾಲ್ಟರ್ಸ್ ಅವರಿಂದ ತರಬೇತಿ ಪಡೆದಿದ್ದಾಳೆ. ಈ ಜಯದೊಂದಿಗೆ ಹರಿಣಿ 50,000 ಡಾಲರ್ ಗಿಂತ ನಗದು ಮತ್ತು ಬಹುಮಾನ ಗಳಿಸಿಕೊಂಡಿದ್ದಾಳೆ.  ಜಯಿಸಿದ್ದು ಖುಷಿ ತಂದಿದೆ ಎಂದು ಆಕೆ ಸಂಭ್ರಮ ಹಂಚಿಕೊಂಡಿದ್ದಾಳೆ. ಕಳೆದ 23 ಚಾಂಪಿಯನ್‌ ಷಿಪ್ ಗಳಲ್ಲಿ ಪ್ರಶಸ್ತಿ ಜಯಿಸಿದವರ ಪೈಕಿ 21 ಮಂದಿ ದಕ್ಷಿಣ ಏಷ್ಯಾದ ಮೂಲದವರಾಗಿದ್ದಾರೆ. ಅದರಲ್ಲಿಯೂ ಬಹುತೇಕರು ಭಾರತೀಯರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!