Thursday, March 30, 2023

Latest Posts

ಭಾರತೀಯ ಸೇನಾ ದಿನದ ವಿಶೇಷ: ಹೊಸ ಯುದ್ಧ ಸಮವಸ್ತ್ರ ಅನಾವರಣ

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಭಾರತೀಯ ಸೇನೆಯ 74ನೇ ಸಂಸ್ಥಾಪನಾ ದಿನದ ಪರೇಡ್‌ನಲ್ಲಿ ಅದು ತನ್ನ ಹೊಸ ಯುದ್ಧ ಸಮವಸ್ತ್ರವನ್ನು ಮೊದಲ ಬಾರಿಗೆ ಅನಾವರಣಗೊಳಿಸಿತು.

ದಿಲ್ಲಿ ಕಂಟೋನ್ಮೆಂಟ್‌ನ ಕಾರಿಯಪ್ಪ ಪರೇಡ್ ಗ್ರೌಂಡ್‌ನಲ್ಲಿ ಪ್ಯಾರಾಚೂಟ್ ರೆಜಿಮೆಂಟ್‌ನ ಕಮಾಂಡೋಗಳ ತುಕಡಿಯು ಹೊಸ ಸಮವಸ್ತ್ರವನ್ನು ಧರಿಸಿ ಸೇನಾ ದಿನದ ಪರೇಡ್‌ನಲ್ಲಿ ಭಾಗವಹಿಸಿತು.

ಭಾರತೀಯ ಸೇನೆಯು ಅನಾವರಣಗೊಳಿಸಿರುವ ಹೊಸ ಯುದ್ಧ ಉಡುಗೆಯು ಆರಾಮದಾಯಕ, ಹವಾಮಾನ ಸ್ನೇಹಿ ಮತ್ತು ಡಿಜಿಟಲ್ ಮರೆಮಾಚುವ ಮಾದರಿಯನ್ನು ಒಳಗೊಂಡಿದೆ. ಆಲಿವ್ ಮತ್ತು ಮಣ್ಣಿನ ಬಣ್ಣಗಳ ಮಿಶ್ರಿತ ಬಣ್ಣವಿರುವ ಸಮವಸ್ತ್ರವನ್ನು ಸೈನ್ಯದ ನಿಯೋಜನೆಯ ಪ್ರದೇಶಗಳು ಮತ್ತು ಸೈನಿಕರು ಕಾರ್ಯನಿರ್ವಹಿಸುವ ಹವಾಮಾನ ಪರಿಸ್ಥಿತಿಗಳಂತಹ ಅಂಶಗಳನ್ನು ಪರಿಗಣಿಸಿ ವಿನ್ಯಾಸಗೊಳಿಸಲಾಗಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯ ಸಹಯೋಗದೊಂದಿಗೆ ವಿವಿಧ ದೇಶಗಳ ಸೇನೆಗಳ ಯುದ್ಧ ಸಮವಸವನ್ನು ವಿಶ್ಲೇಷಿಸಿದ ನಂತರ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. ಸೇನಾ ಅಧಿಕಾರಿಗಳ ಪ್ರಕಾರ, ಈ ಸಮವಸ್ತ್ರವು ಹೆಚ್ಚು ಆರಾಮದಾಯಕವಾಗಿದೆ ಮತ್ತು ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಇದು ಒಗ್ಗಿಕೊಳ್ಳುತ್ತದೆ. ಡಿಜಿಟಲ್ ಮರೆಮಾಚುವ ಮಾದರಿಯನ್ನು ಕಂಪ್ಯೂಟರ್ ಸಹಾಯದಿಂದ ವಿನ್ಯಾಸಗೊಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!