ಹೊಸದಿಗಂತ ಡಿಜಿಟಲ್ ಡೆಸ್ಕ್:
ಅದೇ ದಿನ ಮದುವೆ, ಅದೇ ದಿನ ಪರೀಕ್ಷೆ. ಒಂದನ್ನು ಇನ್ನೊಂದಕ್ಕೆ ಮುಂದೂಡಲು ಸಾಧ್ಯವಾಗದಿರಬಹುದು. ಯಾಕೆಂದರೆ ಮದುವೆ ಎಷ್ಟು ಮುಖ್ಯವೋ.. ವೃತ್ತಿ ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಏರಲು ಪರೀಕ್ಷೆಗಳೂ ಅಷ್ಟೇ ಮುಖ್ಯ.
ಅದಕ್ಕಾಗಿಯೇ ಅನೇಕ ಜನರು ತಮ್ಮ ಮದುವೆಯ ದಿನದಂದು ಪರೀಕ್ಷೆಗೆ ಹಾಜರಾಗುತ್ತಾರೆ. ಅದೂ ಮದುವೆಯ ಡ್ರೆಸ್ ನಲ್ಲಿ ಪರೀಕ್ಷೆಗೆ ಹೋಗೋದು ಇತ್ತೀಚೆಗೆ ಟ್ರೆಂಡ್ ಆಗಿದೆ. ಇಂಥದ್ದೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಸೆಳೆಯುತ್ತಿದೆ. ಆ ಯುವತಿ ತನ್ನ ಮದುವೆಯ ಉಡುಪಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಕೇರಳ ಮೂಲದ ಶ್ರೀ ಲಕ್ಷ್ಮಿ ಅನಿಲ್ ಎಂಬ ಯುವತಿ ಬೆಥನಿ ನವಜೀವನ್ ಕಾಲೇಜಿನಲ್ಲಿ ಫಿಸಿಯೋಥೆರಪಿ ಓದುತ್ತಿದ್ದಾರೆ. ಆಕೆ ಮದುವೆ ದಿನವೇ ಪ್ರಾಕ್ಟಿಕಲ್ ಎಕ್ಸಾಮ್ ಹೀಗಾಗಿ ಮದುವೆಯ ದಿನದಂದು ಕುಟುಂಬಸ್ಥರು ಹಾಗೂ ವರನ ಸಹಾಯದಿಂದ ಪರೀಕ್ಷೆಗೆ ಹಾಜರಾಗಿದ್ದಳು.
ಮದುವೆ ಬ್ಯುಸಿಯಲ್ಲಿಯೂ ಲಕ್ಷ್ಮಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಪರೀಕ್ಷೆಯಲ್ಲಿ ತೇರ್ಗಡೆಯಾದ ಶ್ರೀಲಕ್ಷ್ಮಿಯನ್ನು ಸಹ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
https://www.instagram.com/reel/CoeHlB0ps8m/?utm_source=ig_web_copy_link