ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾದ ವಿರುದ್ಧದ ಮೊದಲ ಅಂಡರ್-19 ಪಂದ್ಯದಲ್ಲಿ ಭಾರತದ ಪುರುಷರ ತಂಡ ಗೆಲುವು ದಾಖಲಿಸಿದ್ದಾರೆ.
ಬ್ಯಾಟರ್ ಯಶ್ ಧೂಲ್ ನಾಯಕತ್ವದಲ್ಲಿನ ಭಾರತ ತಂಡ 46.5 ಓವರ್ ಗಳಲ್ಲಿ 232 ರನ್ ಗಳಿಸಿತು. ಆರಂಭದಲ್ಲಿ ಬಂದ ಬ್ಯಾಟರ್ ರಘುವಂಶಿ (05), ಹರ್ನೂರ್ ಸಿಂಗ್ (01) ಗೆ ಮುಗ್ಗರಿಸಿದರು. ನಂತರ ಬಂದ ರಶೀದ್ (31), ನಾಯಕ ಯಶ್ ಧೂಲ್ (82), ಕೌಶಲ್ ತಾಂಬೆ (35) , ನಿಶಾಂತ್ ಸಿಂಧು(27) ರನ್ ಗಳ ಮೂಲಕ ತಂಡದ ಗೆಲುವಿಗೆ ಕಾರಣರಾದರು.
ನಂತರ ಮೈದಾನಕ್ಕಿಳಿದ ಆಫ್ರಿಕಾ ತಂಡ 45.4 ಓವರ್ ಗಳಲ್ಲಿ 187 ರನ್ ಗಳಿಸಿ ಭಾರತ ತಂಡದ ಎದುರು ಸೋಲೊಪ್ಪಿಕೊಂಡಿತು. ಇನ್ನು ಆಫ್ರಿಕಾ ತಂಡದ 5 ವಿಕೆಟ್ ಅನ್ನು ವಿಕ್ಕಿ ಓತ್ಸವಲ್, 4 ವಿಕೆಟ್ ಅನ್ನು ರಾಜ್ ಭವ ಪಡೆದರು.