Friday, June 2, 2023

Latest Posts

7 ಶೇಕಡಾ ಏರಿಕೆಯಾಗಲಿದೆ ಭಾರತದ ಆರ್ಥಿಕತೆ: ಹಣಕಾಸು ಸಚಿವಾಲಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಾಗತಿಕ ಆರ್ಥಿಕ ಹಿಂಜರಿತ, ಹಣಕಾಸು ಸಮಸ್ಯೆಗಳ ಹೊರತಾಗಿಯೂ 2023ನೇ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು 7 ಶೇಕಡಾ ಬೆಳವಣಿಗೆ ದಾಖಲಿಸುವ ನಿರೀಕ್ಷೆಯಿದೆ ಆದರೆ ಜನವರಿಯಲ್ಲಿ 25 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ಸಗಟು ಹಣದುಬ್ಬರಕ್ಕೆ ಅನುಗುಣವಾಗಿ ಚಿಲ್ಲರೆ ಹಣದುಬ್ಬರವು ಮಧ್ಯಮ ಪ್ರಮಾಣದಲ್ಲಿರುತ್ತದೆ ಎಂದು ಭಾರತದ ವಿತ್ತ ಸಚಿವಾಲಯ ಹೇಳಿದೆ.

ಸೇವಾ ರಫ್ತಿನ ಹೆಚ್ಚಳವು ಲಾಭದಾಯಕತೆಯನ್ನು ಹೆಚ್ಚಿಸಿದ್ದು ಇದು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲಿದೆ. ಇದರ ಜೊತೆ ತೈಲ ಬೆಲೆಗಳಲ್ಲಿನ ಕುಸಿತ, ತೀವ್ರ ಬೇಡಿಕೆ ವಸ್ತುಗಳ ಆಮದಿನಲ್ಲಿನ ಕುಸಿತಗಳಿಂದಾಗಿ 2023 -24ನೇ ಆರ್ಥಿಕ ವರ್ಷದಲ್ಲಿ ಭಾರತದ ಚಾಲ್ತಿ ಖಾತೆ ಕೊರತೆಯು ಕುಸಿಯಲಿದೆ ಇದರಿಂದ ರುಪಾಯಿ ಮೌಲ್ಯವೂ ಕೂಡ ಏರಲಿದೆ ಎಂದು ತನ್ನ ಮಾಸಿಕ ಆರ್ಥಿಕ ಪರಾಮರ್ಶೆಯಲ್ಲಿ ವಿತ್ತ ಸಚಿವಾಲಯ ಹೇಳಿದೆ.

ಭಾರತವು ಐಟಿ ಮತ್ತು ಐಟಿಯೇತರ ಸೇವೆಗಳೆರಡರಲ್ಲೂ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳುತ್ತಿದೆ. ಹಿಂದಿನ ವರ್ಷಕ್ಕಿಂತ ನಿವ್ವಳ ಸೇವಾ ರಫ್ತುಗಳಲ್ಲಿನ ಜಿಗಿತವು ನಿರ್ಣಾಯಕ ಬೆಳವಣಿಗೆ ದಾಖಲಿಸಿದೆ. ಜೊತೆಗೆ ಜಾಗತಿಕವಾಗಿ ಸರಕುಗಳ ಬೆಲೆಯನ್ನು ಸರಾಗಗೊಳಿಸಿರುವುದರಿಂದ ಆಮದು ವೆಚ್ಚವೂ ಕಡಿಮೆಯಾಗಿದೆ. ಈ ಎಲ್ಲ ಕಾರಣಗಳಿಂದ 2023ನೇ ಆರ್ಥಿಕ ವರ್ಷದಲ್ಲಿ ಭಾರತವು ಸುಲಭವಾಗಿ ನಿರ್ವಹಿಸಬಹುದಾದ ಚಾಲ್ತಿಖಾತೆ ಕೊರತೆ ಹಾಗು ಹೆಚ್ಚಿನ ಬೆಳವಣಿಗೆ ದರವನ್ನು ದಾಖಲಿಸಲಿದೆ. ಭಾರತೀಯ ಆರ್ಥಿಕತೆಯು ಸಾಂಕ್ರಾಮಿಕ ಮತ್ತು ಭೌಗೋಳಿಕ ರಾಜಕೀಯ ಒತ್ತಡದಿಂದ ಉಂಟಾದ ಪ್ರಕ್ಷುಬ್ಧತೆಯನ್ನು ಮೀರಿ ಮುಂದುವರೆಯುತ್ತಿದೆ ಎಂದು ಅದು ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!