ಪ್ರಧಾನಿ ಮೋದಿ ಭದ್ರತಾ ವೈಫಲ್ಯ: ಪಂಜಾಬ್ ಡಿಜಿಪಿ, ಪೊಲೀಸರ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನವರಿ 2022 ರಲ್ಲಿ ಪಂಜಾಬ್‌ನಲ್ಲಿ ಪ್ರಧಾನಿಯ ಭದ್ರತಾ ವೈಫಲ್ಯಕ್ಕೆ ಕಾರಣರಾದವರ ವಿರುದ್ಧ ಪಂಜಾಬ್ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.

ಸಿದ್ಧಾರ್ಥ್ ಚಟ್ಟೋಪಾಧ್ಯಾಯ, ಅಂದಿನ ಡಿಜಿಪಿ ಇಂದರ್‌ಬೀರ್ ಸಿಂಗ್, ಫಿರೋಜ್‌ಪುರ ರೇಂಜ್‌ನ ಅಂದಿನ ಡಿಐಜಿ ಮತ್ತು ಅಂದಿನ ಎಸ್‌ಎಸ್‌ಪಿ ಹರ್ಮನ್‌ದೀಪ್ ಹನ್ಸ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರ ಭಗವಂತ್ ಮಾನ್ ಮುಂದಾಗಿದ್ದಾರೆ.

ಪಿಎಂ ಮೋದಿ ಅವರು ಪಂಜಾಬ್‌ನ ಹುಸೇನಿವಾಲಾಗೆ ಪ್ರಯಾಣಿಸುವಾಗ ಫಿರೋಜ್‌ಪುರದಲ್ಲಿ ಪ್ರತಿಭಟನಾಕಾರರಿಂದಾಗಿ ಅವರ ಬೆಂಗಾವಲು ಸುಮಾರು 15 ನಿಮಿಷ ಫ್ಲೈಓವರ್‌ನಲ್ಲಿ ಸಿಲುಕಿಹಾಕಿಕೊಂಡಿದ್ದು, ಭದ್ರತೆ ಉಲ್ಲಂಘಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!