ಉಕ್ರೇನ್‌ನಲ್ಲಿ ಸಿಲುಕಿದ್ದ ಪಾಕ್ ಯುವತಿಗೆ ಭಾರತದ ನೆರವು: ಪ್ರಧಾನಿ ಮೋದಿಗೆ ಯುವತಿ ಧನ್ಯವಾದ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್‌ನ ಗಡಿಭಾಗಕ್ಕೆ ತೆರಳಿ, ರೊಮೇನಿಯಾ ಪ್ರವೇಶಿಸಲು ಪಾಕಿಸ್ತಾನ ಸೇರಿದಂತೆ ಇತರ ರಾಷ್ಟ್ರಗಳ ವಿದ್ಯಾರ್ಥಿಗಳು ಭಾರತದ ಧ್ವಜ ಹಿಡಿದು ಸುರಕ್ಷಿತವಾಗಿ ಬಂದಿದ್ದರು.
ಇದೀಗ ಪಾಕಿಸ್ತಾನದ ಯುವತಿಯೊಬ್ಬಳು ತನ್ನ ನೆಲೆ ಸೇರಲು ಭಾರತದ ರಾಯಭಾರ ಕಚೇರಿ ಸಹಾಯ ಮಾಡಿದ್ದು, ಭಾರತದ ರಾಯಭಾರ ಕಚೇರಿ, ಭಾರತ ಹಾಗೂ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

ಪಾಕಿಸ್ತಾನದ ಆಸ್ಮಾ ಶೆಫಿಕ್ ಕೀವ್‌ನಿಂದ ಸುರಕ್ಷಿತವಾಗಿ ಪಶ್ಚಿಮ ಉಕ್ರೇನ್ ಕಡೆಗೆ ತೆರಳಲು ಭಾರತದ ಅಧಿಕಾರಿಗಳು ಸಹಾಯ ಮಾಡಿದ್ದಾರೆ. ಪಶ್ಚಿಮ ಉಕ್ರೇನ್‌ನಿಂದ ಆಸ್ಮಾ ಪಾಕಿಸ್ತಾನಕ್ಕೆ ತೆರಳಿದ್ದು, ಈ ಸಹಾಯಕ್ಕಾಗಿ ಭಾರತಕ್ಕೆ ಹಾಗೂ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಉಕ್ರೇನ್‌ನಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ರಾಯಭಾರ ಕಚೇರಿಗಳು ಅವರನ್ನು ತಾಯ್ನಾಡಿಗೆ ಕಳುಹಿಸಲು ಶತಪ್ರಯತ್ನ ಮಾಡುತ್ತಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!