ರಷ್ಯಾಕ್ಕೆ ಭಾರೀ ಹೊಡೆತ: ತೈಲ, ಅನಿಲ ಆಮದಿಗೆ ನಿಷೇಧ ಹೇರಿದ ಅಮೆರಿಕ, ಬ್ರಿಟನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೆರಿಕ ಹಾಗೂ ಬ್ರಿಟನ್‌ ರಾಷ್ಟ್ರಗಳು ರಷ್ಯಾದಿಂದ ತೈಲ ಮತ್ತು ಇತರ ಅನಿಲಗಳ ಆಮದಿನ ಮೇಲೆ ನಿಷೇಧ ಹೇರಿವೆ.
ವಿಶ್ವದ ನಾಯಕರು, ಸಮುದಾಯದ ಎಚ್ಚರಿಕೆಯ ನಡುವೆಯೂ ರಷ್ಯಾ ಉಕ್ರೇನ್‌ ಮೇಲೆ ದಾಳಿ ಮುಂದುವರಿಸಿದ್ದರಿಂದ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಈ ನಿರ್ಧಾರ ಕೈಗೊಂಡಿದ್ದಾರೆ.
ಈ ಬಗ್ಗೆ ಶ್ವೇತ ಭವನದಲ್ಲಿ ಮಾತನಾಡಿದ ಅವರು, ನಾವು ರಷ್ಯಾದಿಂದ ತೈಲ ಮತ್ತು ಅನಿಲ ಆಮದುಗಳನ್ನು ನಿಷೇಧಿಸುತ್ತಿದ್ದೇವೆ. ಇನ್ನು ಮುಂದೆ ನಮ್ಮ ಬಂದರುಗಳಲ್ಲಿ ರಷ್ಯಾದ ತೈಲ ಸ್ವೀಕರಿಸುವುದಿಲ್ಲ. ಈ ಮೂಲಕ ರಷ್ಯಾಕ್ಕೆ ಅಮೆರಿಕ ಜನತೆ ಪ್ರಬಲ ಹೊಡೆತ ನೀಡುತ್ತಿದ್ದಾರೆ ಎಂದು ತಿಳಿಸಿದರು.
ರಷ್ಯಾ ಉಕ್ರೇನ್‌ ಮೇಲೆ ದಾಳಿ ಮುಂದುವರಿಸಿದರು ಕೂಡ ಪುಟಿನ್‌ ಗೆ ಗೆಲುವು ಸಿಗುವುದಿಲ್ಲ. ಉಕ್ರೇನ್‌ ದೇಶವನ್ನು ಪುಟಿನ್‌ ಹಿಡಿದಿಟ್ಟಿಕೊಳ್ಳಲಾರರು ಎಂದಿದ್ದಾರೆ.
ಇನ್ನು ಅಮೆರಿಕದ ಈ ನಿರ್ಧಾರದ ಬೆನ್ನಲ್ಲೇ ಬ್ರಿಟನ್‌ ಸರ್ಕಾರ ಕೂಡ ರಷ್ಯಾದ ಕಚ್ಚಾ ತೈಲ ಸೇರಿ ಎಲ್ಲಾ ಅನಿಲಗಳ ಮೇಲೆ ನಿರ್ಬಂಧ ವಿಧಿಸಿದೆ.
ಹಂತ ಹಂತವಾಗಿ ಎರಡೂ ರಾಷ್ಟ್ರಗಳಲ್ಲಿ ಆಮದು ನಿರ್ಬಂಧ ಜಾರಿಯಲ್ಲಿದ್ದು, 2022ರ ಅಂತ್ಯದ ಮೇಳೆಗೆ ಈದು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ.
ಬ್ರಿಟನ್​ನಲ್ಲಿ ಬಳಕೆಯಾಗುವ ಪೆಟ್ರೋಲಿಯಂ ಉತ್ಪನ್ನಗಳ ಪೈಕಿ ಶೇ.8ರಷ್ಟು ಬೇಡಿಕೆಯನ್ನು ರಷ್ಯಾದಿಂದ ಆಮದಾಗುವ ಪೆಟ್ರೋಲಿಯಂ ಉತ್ಪನ್ನಗಳು ಪೂರೈಸುತ್ತಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!