ಪ್ಯಾಲೆಸ್ತೀನ್‌ನ ಭಾರತದ ರಾಯಭಾರಿ ಮುಕುಲ್ ಆರ್ಯಾ ಮೃತದೇಹ ಕಚೇರಿಯಲ್ಲಿ ಪತ್ತೆ: ತನಿಖೆಗೆ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾಲೆಸ್ತೀನ್ ದೇಶಕ್ಕೆ ಭಾರತದ ರಾಯಭಾರಿಯಾಗಿದ್ದ ಮುಕುಲ್ ಆರ್ಯಾ ಮೃತದೇಹ ರಾಯಭಾರಿ ಕಚೇರಿಯಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್. ಜೈಶಂಕರ್ ಟ್ವೀಟ್ ಮಾಡಿದ್ದು, ಪ್ಯಾಲೆಸ್ತೀನ್‌ನ ರಾಮಲ್ಲಾದಲ್ಲಿದ್ದ ಭಾರತದ ರಾಯಭಾರಿ ಮುಕುಲ್ ಆರ್ಯಾ ನಿಧನ ವಾರ್ತೆ ಕೇಳಿ ಶಾಕ್ ಆಗಿದೆ. ಅವರು ಪ್ರತಿಭಾವಂತ ಅಧಿಕಾರಿ ಆಗಿದ್ದರು. ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ ಎಂದು ಹೇಳಿದ್ದಾರೆ.

ರಾಯಭಾರಿ ಕಚೇರಿಯಲ್ಲಿ ಮೃತದೇಹ ಪತ್ತೆಯಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಸೂಕ್ತ ತನಿಖೆಗೆ ಪ್ಯಾಲಸ್ತೀನ್ ಆಡಳಿತ ಆದೇಶ ನೀಡಿದೆ.

ಮೃತದೇಹವನ್ನು ಭಾರತಕ್ಕೆ ಕಳುಹಿಸುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಭಾರತದ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಈ ಘಟನೆಯಿಂದ ಮನಸ್ಸಿಗೆ ತೀವ್ರ ನೋವಾಗಿದೆ ಎಂದು ಪ್ಯಾಲೆಸ್ತೀನ್ ಕೇಂದ್ರ ವಿದೇಶಾಂಗ ಇಲಾಖೆ ಸಚಿವ ಡಾ. ರಿಯಾದ್ ಅಲ್ ಮಲಿಕಿ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!