ದಿನಭವಿಷ್ಯ: ಆರೋಗ್ಯದ ಬಗ್ಗೆ ಗಮನ ಇರಲಿ, ಹೊರಗಿನ ಆಹಾರ ಸೇವನೆ ಕಡಿಮೆ ಮಾಡಿ!

ಸೋಮವಾರ, 7 ಮಾರ್ಚ್  2022

ಮೇಷ
ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಹೊರಗಿನ ಆಹಾರ ಸೇವಿಸುವುದಾದಲ್ಲಿ ಎಚ್ಚರವಿರಲಿ. ಕುಟುಂಬದ ಹಿರಿಯರಿಗೆ ಅನಾರೋಗ್ಯ ಸಂಭವ.

ವೃಷಭ
ಅದೃಷ್ಟ ನಿಮ್ಮ ಮನೆಬಾಗಿಲು ತಟ್ಟುವುದು. ಕಾರ್ಯದಲ್ಲಿ ಸಫಲತೆ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಬಂಧುಗಳ ಆಗಮನ.

ಮಿಥುನ
ನಿಮ್ಮ ಮನಸ್ಥಿತಿ ಬದಲಿಸಬಲ್ಲ ಬೆಳವಣಿಗೆ ಸಂಭವಿಸಬಹುದು. ಬೇರೆಯವರ ಮನ ಗೆಲ್ಲುವಿರಿ. ಅವಿವಾಹಿತರಿಗೆ ಶುಭ ಸುದ್ದಿ ದೊರಕೀತು.

ಕಟಕ
ಕಠಿಣ ಪರಿಶ್ರಮದಿಂದ ಮಾಡಿದ ಕೆಲಸವು ಇಂದು ಬಯಸಿದ ಫಲ ನೀಡುವುದಿಲ್ಲ. ಆದರೆ ನಿರಾಶೆ ಬೇಡ, ಪ್ರಯತ್ನ ಮುಂದುವರಿಸಿ. ನಾಳೆ ಎಂಬುದಿದೆ.

ಸಿಂಹ
ಯಾವುದೇ ಗುರಿಗೆ ಬಾಣ ಬಿಟ್ಟರೂ ಅದು ಗುರಿತಲುಪುವುದು. ನಿಮ್ಮ ಕಾರ್ಯವು ನಿರ್ವಿಘ್ನವಾಗಿ ನೆರವೇರುವುದು. ಕೌಟುಂಬಿಕ ಸಂತೋಷ.

ಕನ್ಯಾ
ನಿಮ್ಮ ಪ್ರತಿಭೆಯ ಅನಾವರಣ ಆಗಲಿದೆ. ಇತರರ ಮೆಚ್ಚುಗೆ ಗಳಿಸುವಿರಿ. ನಿಮ್ಮ ಶ್ರಮಕ್ಕೆ ತಕ್ಕುದಾದ ಫಲವನ್ನೆ ಪಡೆಯುವಿರಿ. ಕೌಟುಂಬಿಕ ಶಾಂತಿ.

ತುಲಾ
ನಿಮಗೆ ಅಪರಿಚಿತ ಎನಿಸುವ ಪರಿಸ್ಥಿತಿಯಲ್ಲಿ ಸಿಲುಕುವಿರಿ. ಅದರಿಂದ ಗೊಂದಲಕ್ಕೆ ಒಳಗಾಗುವಿರಿ. ಆಪ್ತರ ಸಲಹೆ, ಸೂಚನೆ ಬೇಕಾಗುವುದು.

ವೃಶ್ಚಿಕ
ನಿಮ್ಮ ನಿರ್ಧಾರವು ಉತ್ತಮ ಫಲ ನೀಡಲಿದೆ.  ಹಾಗಾಗಿ ಕಠಿಣ ನಿರ್ಧಾರ ತಾಳುವಲ್ಲಿ ಹಿಂಜರಿಕೆ ಬೇಡ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು.

ಧನು
ಸಂಗಾತಿಯ ಬೇಡಿಕೆಯನ್ನು ಈಡೇರಿಸಲು ನೀವು ಇಂದು ಗಮನ ಕೊಡಬೇಕಾಗುವುದು. ಅದರಿಂದ ನಿಮಗೂ, ಮನೆಗೂ ಹಿತ.

ಮಕರ
ಬೇರೆಯವರ ಸಮಸ್ಯೆಗೆ ತುಡಿಯುತ್ತೀರಿ. ಆದರೆ ನಿಮ್ಮ ಹಿತಾಸಕ್ತಿ ಕಡೆಗಣಿಸಬೇಡಿ. ಇತರರಿಗೆ ನೆರವು ನೀಡುವುದಕ್ಕೂ ಒಂದು ಮಿತಿಯಿರಲಿ.

ಕುಂಭ
ಇಂದು ಹೊರಗಿನ ಗೊಂದಲಗಳು, ಗಲಾಟೆಗಳು ನಿಮ್ಮನ್ನು ಕಾಡುವುದಿಲ್ಲ. ನಿಮ್ಮೊಳಗೆ ಶಾಂತತೆಯನ್ನು ಕಾಯ್ದುಕೊಳ್ಳು
ವಿರಿ. ಆಧ್ಯಾತ್ಮದ ಆಸಕ್ತಿ.

ಮೀನ
ಗೊಂದಲಗಳು ಕಳೆದು ತಿಳಿಯಾಗಲಿದೆ. ಹೃದಯದ ಭಾವನೆಗೆ ಬೆಲೆ ದೊರಕಲಿದೆ. ಭಾವನಾತ್ಮಕ ಸಂತೋಷ ಅನುಭವಿಸುವಿರಿ. ಕೌಟುಂಬಿಕ ತೃಪ್ತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!