ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಪ್ರಧಾನಿ ಮೋದಿ ಬೀದರ್‌ನ ಏರ್ ಬೇಸ್‌ಗೆ ಆಗಮಿಸಲಿದ್ದು, ನಗರದ ಮೂರು ಕಿಲೋಮೀಟರ್ ವ್ಯಾಪ್ತಿಯಲಿ ಡ್ರೋನ್ ಹಾರಾಟ ಬಂದ್ ಮಾಡಲಾಗಿದೆ.
ಛತ್ತೀಸ್‌ಗಢದ ವಿಮಾನನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಪ್ರಧಾನಿ ಮೋದಿ ಇಂದು ಬೀದರ್‌ಗೆ ಆಗಮಿಸಲಿದ್ದಾರೆ. ತದನಂತರ ಬೀದರ್ ಏರ್‌ಬೇಸ್‌ನಿಂದ ಸೇನಾ ಹೆಲಿಕಾಪ್ಟರ್ ಮೂಲಕ ತೆಲಂಗಾಣಷ ನಿಜಾಮಾಬಾದ್‌ಗೆ ತೆರಳಲಿದ್ದಾರೆ.
ಸಂಜೆ ವೇಳೆಗೆ ನಿಜಾಮಾಬಾದ್‌ನಿಂದ ಬೀದರ್ ಏರ್‌ಬೇಸ್‌ಗೆ ವಾಪಾಸಾಗಲಿದ್ದು, ಅಲ್ಲಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.