ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾನಸಿಕ ಮತ್ತು ದೈಹಿಕವಾಗಿ ದುರ್ಬಲವಾಗಿದ್ದ ವ್ಯಕ್ತಿಯೊಬ್ಬರಿಗೆ ಹಣವಂಚನೆಯ ಆರೋಪದ ಮೇಲೆ ಭಾರತೀಯ ಮೂಲದ ಚಾರ್ಟೆಡ್ ಅಕೌಂಟೆಂಟ್ ಒಬ್ಬನಿಗೆ ಇಂಗ್ಲೆಂಡ್ ನ್ಯಾಯಾಲಯವು ಐದು ವರ್ಷಗಳ ಶಿಕ್ಷೆ ವಿಧಿಸಿದೆ.
ಭಾರತೀಯ ಮೂಲದ ಲೆಕ್ಕ ಪರಿಶೋಧಕ ಸುಖ್ವಿಂದರ್ ಸಿಂಗ್ ಗೆ ಒಟ್ಟೂ ನಾಲ್ಕು ವಂಚನೆ ಮತ್ತು ಒಂದು ಹಣದ ದುರುಪಯೋಗ ಪ್ರಕರಣಗಳಿಗೆ ಈಶಾನ್ಯ ಇಂಗ್ಲೆಂಡ್‌ನ ಯಾರ್ಕ್ ಕ್ರೌನ್ ಕೋರ್ಟ್ ಶಿಕ್ಷೆ ವಿಧಿಸಿದೆ. ಸಂತ್ರಸ್ತೆಯ ಹೆಸರನ್ನು ಗೌಪ್ಯವಾಗಿಡಲಾಗಿದ್ದು ಒಟ್ಟು 331,858 ಪೌಂಡ್ ವಂಚನೆ ಮಾಡಿದ್ದರು ಎಂದು ಅರೋಪಿಸಲಾಗಿದೆ. ಈ ಸಂಬಂಧ ಸಿಂಗ್ ಗೆ ಸೇರಿದ್ದು ಎನ್ನಲಾಗಿರುವ ಸ್ಪೇನ್ ನಲ್ಲಿರುವ ಸುಮಾರು 62,000 ಪೌಂಡ್‌ಗಳಿಗಿಂತ ಹೆಚ್ಚು ಮೌಲ್ಯದ ಅಪಾರ್ಟ್ ಮೆಂಟ್ ಹಾಗೂ ಬ್ಯಾಂಕ್ ಖಾತೆಯಲ್ಲಿರುವ 5 ಸಾವಿರ ಪೌಂಡ್ ಗಳನ್ನು ವಶಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.