ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ಕುಟುಂಬ ಅಪಹರಣ, ಕೊಲೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತ ಮೂಲದ ಕುಟುಂಬವನ್ನು ಅಪಹರಿಸಿ ಕೊಲೆ ಮಾಡಲಾಗಿದೆ.
ಪಂಜಾಬ್ ಮೂಲದ ಜಸ್‌ಪ್ರೀತ್ ಸಿಂಗ್, ಪತ್ನಿ ಜಸ್ಲೀನ್ ಕೌರ್ ಮಗುವಿನ ಚಿಕ್ಕಪ್ಪ ಅಮನ್ ದೀಪ್ ಸಿಂಗ್ ಹಾಗೂ ಎಂಟು ತಿಂಗಳ ಮಗು ಆರುಹಿ ಧೇರಿ ಮೃತರು.

ಸೋಮವಾರ ಸೌತ್ ಹೈವೇ ಬಳಿ ಶಸ್ತ್ರಾಸ್ತ್ರ ತೋರಿಸಿದ ದುಷ್ಕರ್ಮಿಗಳು ನಾಲ್ವರನ್ನು ಅಪಹರಿಸಿದ್ದರು. ಇದೀಗ ಅವರ ಮೃತದೇಹ ದೊರೆತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತೋಟದಲ್ಲಿ ಕೆಲಸ ಮಾಡುವವರು ಶವಗಳ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣವೇ ಸ್ಥಳಕ್ಕೆ ತಲುಪಿದ್ದಾರೆ. ಆರೋಪಿ ಜೀಸಸ್ ಮ್ಯಾನುಯೆಲ್‌ನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.ದ್ವೇಷದಿಂದ ಕೊಲೆ ಮಾಡಿರುವ ಶಂಕೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!