ಇಸ್ರೇಲ್‌ ನಲ್ಲಿ ಬರ್ತ್‌ಡೇ ಪಾರ್ಟಿ ವೇಳೆ ಭಾರತೀಯ ಮೂಲದ ಯುವಕನಿಗೆ ಇರಿದು ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಸ್ರೇಲ್‌ಗೆ ವಲಸೆ ಹೋಗಿದ್ದ ಭಾರತ ಮೂಲದ ಯುವಕನನ್ನು ಬರ್ತ್‌ಡೆ ಪಾರ್ಟಿ ವೇಳೆ ನಡೆದ ಗಲಾಟೆಯಲ್ಲಿ ಸ್ನೇಹಿತರೇ ಇರಿದು ಕೊಂದಿರುವ ಘಟನೆ ಇಸ್ರೇಲ್‌ನ ಕ್ರಿಯಾತ್ ಶ್ಮೋನಾ ಎಂಬ ನಗರದಲ್ಲಿ ನಡೆದಿದೆ.
ಮೃತ ಯುವಕನನ್ನು ಈಶಾನದ್ಯ ಭಾರತ ಮೂಲದ ಯೋಯೆಲ್ ಲೆಹಿಂಗಾಹೆಲ್ (18) ಎಂದು ಗುರುತಿಸಲಾಗಿದೆ. ಕಳೆದ ವರ್ಷವಷ್ಟೇ ಈತ ಇಸ್ರೇಲ್‌ಗೆ ತರಳಿದ್ದ. ಉತ್ತರ ಇಸ್ರೇಲಿ ನಗರವಾದ ಕಿರ್ಯಾತ್ ಶ್ಮೋನಾದಲ್ಲಿ ಭಾರತದಿಂದ ಬಂದ ಸ್ನೇಹಿತ ಮತ್ತು ಸಹ ವಲಸಿಗರನ್ನು ಭೇಟಿ ಮಾಡಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದಾಗ ಜಗಳ ಸಂಭವಿಸಿ ಆತನನ್ನು ಚಾಕುವಿನಿಂದ ಇರಿದಿದ್ದಾರೆ. ಪಾರ್ಟಿಯಲ್ಲಿ 20 ಕ್ಕೂ ಹೆಚ್ಚು ಯುವಕರು ಭಾಗಿಯಾಗಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮರುದಿನ ಮೃತನ ಕುಟುಂಬಸ್ಥರಿಗೆ ಯುವಕನ ಸ್ನೇಹಿತ ಕರೆ ಮಾಡಿ ಹಿಂದಿನ ರಾತ್ರಿ ನಡೆದ ಗಲಾಟೆಯಲ್ಲಿ ಯೋಯೆಲ್ ಲೆಹಿಂಗಾಹೆಲ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾನೆ. ಕುಟುಂಬದವರು ಆಸ್ಪತ್ರೆಗೆ ತೆರಳುವ ಮುನ್ನವೇ ಆತ ಮೃತಪಟ್ಟಿದ್ದಾನೆ.
ಟೈಮ್ಸ್ ಆಫ್ ಇಸ್ರೇಲ್ ಪತ್ರಿಕೆಯ ಪ್ರಕಾರ, ಘಟನೆ ಸಂಬಂಧ ಪೊಲೀಸರು 13 ರಿಂದ 15 ವರ್ಷದೊಳಗಿನ ಏಳು ಯುವಕರನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!