ಮೆಕ್ಸಿಕೋದಲ್ಲಿ ನಿಗೂಢವಾಗಿ ಅಸ್ವಸ್ಥಗೊಂಡ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು: ಸಾಮೂಹಿಕ ವಿಷ ಪ್ರಾಶನ ಶಂಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೆಕಸಿಕೋದ ದಕ್ಷಿಣ ರಾಜ್ಯವಾದ ಚಿಯಾಪಾಸ್‌ನಲ್ಲಿರುವ ಗ್ರಾಮೀಣ ಮಾಧ್ಯಮಿಕ ಶಾಲೆಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿಗೂಢವಾಗಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಕೆಲ ವರದಿಗಳ ಪ್ರಕಾರ ವಿದ್ಯಾರ್ಥಿಗಳೆಲ್ಲರೂ ಸಾಮೂಹಿಕ ವಿಷ ಪ್ರಾಶನಕ್ಕೊಳಗಾಗಿರುವ ಶಂಕೆ ವ್ಯಕ್ತವಾಗಿದ್ದು ಗುರುತಿಸಲಾಗದ ವಸ್ತುವಿನಿಂದ ವಿಷಪೂರಿತರಾಗಿದ್ದಾರೆ ಎನ್ನಲಾಗಿದೆ.

ಮೂಲಗಳ ವರದಿಯ ಪ್ರಕಾರ ಳೆದ ಎರಡು ವಾರಗಳಲ್ಲಿ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾದ ಸಾಮೂಹಿಕ ವಿಷ ಪ್ರಕರಣಗಳಲ್ಲಿ ಇದು ಮೂರನೆಯದಾಗಿದೆ. ಬೋಚಿಲ್‌ನ ಗ್ರಾಮೀಣ ಸಮುದಾಯದ 57 ಹದಿಹರೆಯದ ವಿದ್ಯಾರ್ಥಿಗಳು ವಿಷದ ಲಕ್ಷಣಗಳೊಂದಿಗೆ ಸ್ಥಳೀಯ ಆಸ್ಪತ್ರೆಗೆ ಬಂದಿದ್ದಾರೆ ಎಂದು ಮೆಕ್ಸಿಕನ್ ಸಾಮಾಜಿಕ ಭದ್ರತಾ ಸಂಸ್ಥೆ ಶುಕ್ರವಾರ ತಿಳಿಸಿದೆ. “ಸೂಕ್ಷ್ಮ” ಸ್ಥಿತಿಯಲ್ಲಿರುವ ಒಬ್ಬ ವಿದ್ಯಾರ್ಥಿಯನ್ನು ರಾಜ್ಯದ ರಾಜಧಾನಿಯ ಆಸ್ಪತ್ರೆಗೆ ವರ್ಗಾಯಿಸಲಾಯಿತು ಮತ್ತು ಉಳಿದವರು ಸ್ಥಿರವಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಕೆಲ ಪಾಲಕರು ಇದು ಕಲುಷಿತ ನೀರು ಅಥವಾ ಆಹಾರದಿಂದ ಸಂಭವಿಸಿರಬಹುದು ಎನ್ನುತ್ತಿದ್ದು ಇನ್ನೂ ಕೆಲವರು ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಕೊಕೇನ್‌ ಸಂಭಧಿಸಿದ ವಿಷವಸ್ತು ಪತ್ತೆಯಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ರಾಜ್ಯ ಪ್ರಾಸಿಕ್ಯೂಟರ್‌ ಕಚೇರಿ ಶನಿವಾರ ಈ ಆರೋಪವನ್ನು ತಳ್ಳಿ ಹಾಕಿದೆ.

ಸೆಪ್ಟೆಂಬರ್ 23 ರಿಂದ, ಸ್ಥಳೀಯ ಮಾಧ್ಯಮಗಳು ಟಪಾಚುಲಾ ನಗರದಲ್ಲಿ ಎರಡು ಹಿಂದಿನ ಸಾಮೂಹಿಕ ವಿಷದ ಪ್ರಕರಣಗಳನ್ನು ವರದಿ ಮಾಡಿದೆ. ಇದು ಹತ್ತಾರು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!