ಮೈಕ್ರೋಸಾಫ್ಟ್‌- ವಿಂಡೋಸ್‌ ನ ಮುಖ್ಯಸ್ಥರಾಗಿ ಭಾರತೀಯ ಪವನ್ ದಾವುಲೂರಿ ನೇಮಕ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮೈಕ್ರೋಸಾಫ್ಟ್‌ ವಿಂಡೋಸ್‌ & ಸರ್ಫೇಸ್‌ನ ಹೊಸ ಮುಖ್ಯಸ್ಥರನ್ನಾಗಿ ಐಐಟಿ ಮದ್ರಾಸ್‌ನ ಮಾಜಿ ವಿದ್ಯಾರ್ಥಿ, ಭಾರತೀಯ ಮೂಲದ ಪವನ್‌ ದಾವುಲೂರಿ ಅವರನ್ನು ನೇಮಕ ಮಾಡಲಾಗಿದೆ.

ಇಲ್ಲಿಯವರೆಗೂ ಈ ಸ್ಥಾನ ವಹಿಸಿಕೊಂಡಿದ್ದ ಪಾನೋಸ್‌ ಪನಯ್‌ ಅವರ ನಿರ್ಗಮನದ ಬಳಿಕ ಈ ಹುದ್ದೆ ಖಾಲಿ ಉಳಿದಿದತ್ತು. ಇದೀಗ ಪವನ್‌ ದಾವುಲೂರಿ ಅವರನ್ನು ಈ ಸ್ಥಾನಕ್ಕ ನೇಮಿಸಲಾಗಿದೆ.

ಸಾಮಾನ್ಯವಾಗಿ ಮೈಕ್ರೋಸಾಫ್ಟ್‌ ತನ್ನ ವಿಂಡೋಸ್‌ ಹಾಗೂ ಸರ್ಫೇಸ್‌ ಗ್ರೂಪ್‌ಗಳಿಗೆ ಭಿನ್ನ ಮುಖ್ಯಸ್ಥರನ್ನು ನೇಮಕ ಮಾಡುತ್ತದೆ. ಇದಕ್ಕೂ ಮುನ್ನ ಪವನ್‌ ದಾವುಲೂರಿ, ಸರ್ಫೇಸ್‌ನ ಸಿಲಿಕಾನ್‌ ವರ್ಕ್‌ನ ಉಸ್ತುವಾರಿ ವಹಿಸಿಕೊಂಡಿದ್ದರೆ, ಮಿಖಾಯಿಲ್‌ ಪಾರಾಖಿನ್‌, ವಿಂಡೋಸ್‌ ವಿಭಾಗವನ್ನು ನೋಡಿಕೊಳ್ಳುತ್ತಿದ್ದರು. ಆದರೆ, ಪಾರಾಖಿನ್‌ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ನಿರ್ಧಾರ ಮಾಡಿದ ಕಾರಣ, ದಾವುಲೂರಿ ಈಗ ಮೈಕ್ರೋಸಾಫ್ಟ್‌ನ ವಿಂಡೋಸ್‌ ಹಾಗೂ ಸರ್ಫೇಸ್‌ ಎರಡರ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಪವನ್‌ ದಾವುಲೂರಿಗೆ ಭಾರತದ ನೇರ ಸಂಪರ್ಕವಿದೆ. ಐಐಟಿ ಮದ್ರಾಸ್‌ನಿಂದ ಅವರು ಪದವಿ ಪಡೆದಿದ್ದಾರೆ. ಹೊಸ ಜವಾಬ್ದಾರಿಯೊಂದಿಗೆ ಅವರು ಅಮೆರಿಕದ ಪ್ರಖ್ಯಾತ ಟೆಕ್‌ ಕಂಪನಿಗಳ ಉಸ್ತುವಾರಿ ವಹಿಸಿಕೊಂಡ ಭಾರತೀಯ ಸಾಲಿಗೆ ಸೇರಲಿದ್ದಾರೆ. ಈಗಾಗಲೇ ಸುಂದರ್‌ ಪಿಚೈ ಹಾಗೂ ಸತ್ಯ ನಾದೆಳ್ಳ ಅಮೆರಿಕದ ಪ್ರಮುಖ ಟೆಕ್‌ ಕಂಪನಿಗಳ ನೊಗ ಹೊತ್ತಿದ್ದಾರೆ.

ದಾವಲೂರಿ ಅವರು ಮೈಕ್ರೋಸಾಫ್ಟ್‌ನೊಂದಿಗೆ 23 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದಲ್ಲಿ ಎಂಎಸ್‌ನೊಂದಿಗೆ ಅವರ ಸ್ನಾತಕೋತ್ತರ ಪದವಿಯ ನಂತರ, ದಾವುಲೂರಿ ಅವರು ಮೈಕ್ರೋಸಾಫ್ಟ್‌ನ ರಿಯಾಲಬಲಿಟಿ ಕಾಂಪೋನೆಂಟ್‌ ಮ್ಯಾನೇಜರ್‌ ಆಗಿ ಸೇರಿಕೊಂಡಿದ್ದರು. ಮೆಮೊದಲ್ಲಿ, ರಾಜೇಶ್ ಝಾ ಅವರು ಮೈಕ್ರೋಸಾಫ್ಟ್ ಎಐ ಸಂಸ್ಥೆಯ ಸ್ಥಾಪನೆಯ ನಂತರ ವಿಂಡೋಸ್ ಮತ್ತು ವೆಬ್ ಅನುಭವಗಳ (WWE) ತಂಡದೊಳಗಿನ ಸಾಂಸ್ಥಿಕ ಬದಲಾವಣೆಗಳ ಬಗ್ಗೆ ತಂಡಕ್ಕೆ ತಿಳಿಸಿದರು. ಮಿಖಾಯಿಲ್ ಪರಾಖಿನ್ ಅವರು ಕೆವಿನ್ ಸ್ಕಾಟ್ ಅವರ ಮೇಲ್ವಿಚಾರಣೆಯಲ್ಲಿ ಹೊಸ ಪಾತ್ರಗಳನ್ನು ಅನ್ವೇಷಿಸುತ್ತಾರೆ, WWE ನಿಂದ ಪರಿವರ್ತನೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!