ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸ್ವಾತಂತ್ರ್ಯ ಪಡೆದ ಈ 75 ವರ್ಷಗಳಲ್ಲಿ 75 ಯೋಜಿತ ನಗರಗಳನ್ನು ಅಭಿವೃದ್ಧಿಪಡಿಸಿದ್ದರೆ, ವಿಶ್ವದಲ್ಲಿ ಭಾರತದ ಸ್ಥಾನವು ಸಂಪೂರ್ಣವಾಗಿ ವಿಭಿನ್ನವಾಗಿರುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೇಂದ್ರದ ಬಜೆಟ್ ಘೋಷಣೆ ನಂತರದ 12 ವೆಬಿನಾರ್‌ಗಳ ಸರಣಿಯಲ್ಲಿ ಇಂದು ನಡೆದ ಆರನೇ ಆವೃತ್ತಿಯ ವೆಬಿನಾರ್‌ನಲ್ಲಿ ‘ಯೋಜನೆಯ ಮೇಲೆ ಕೇಂದ್ರೀಕರಿಸಿದ ನಗರಾಭಿವೃದ್ಧಿ’ ವಿಷಯದ ಕುರಿತು ಮಾತನಾಡಿದರು.
ಈ ವೇಳೆ 21ನೇ ಶತಮಾನದಲ್ಲಿ ಭಾರತದಲ್ಲಿ ಉತ್ತಮ ಯೋಜಿತ ನಗರಗಳ ಅಗತ್ಯತೆ ಇದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು. ನಗರಾಭಿವೃದ್ಧಿ ಮಾನದಂಡಗಳಿಗಾಗಿ ಈ ವರ್ಷದ ಬಜೆಟ್‌ನಲ್ಲಿ 15,000 ಕೋಟಿ ರೂ.ಗಳ ಪ್ರೋತ್ಸಾಹಧನವನ್ನು ಘೋಷಿಸಲಾಗಿದೆ ಮತ್ತು ಇದು ಯೋಜಿತ ನಗರೀಕರಣಕ್ಕೆ ಉತ್ತೇಜನವನ್ನು ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಗಳಲ್ಲಿ ನಗರ ಯೋಜನಾ ಪರಿಸರ ವ್ಯವಸ್ಥೆಯನ್ನು ಹೇಗೆ ಬಲಪಡಿಸುವುದು, ನಗರ ಯೋಜನೆಯಲ್ಲಿ ಖಾಸಗಿ ವಲಯದಲ್ಲಿ ಲಭ್ಯವಿರುವ ಪರಿಣತಿಯನ್ನು ಹೇಗೆ ಸರಿಯಾಗಿ ಬಳಸುವುದು ಮತ್ತು ಕೊನೆಯದಾಗಿ ಶ್ರೇಷ್ಠತೆಯ ಕೇಂದ್ರವನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂಬ ಮೂರು ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸುವಂತೆ ಮತ್ತು ನಗರ ಯೋಜನೆಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಿರಿ ಎಂದು ವೆಬಿನಾರ್‌ನಲ್ಲಿ ಭಾಗವಹಿಸಿದವರನ್ನು ಒತ್ತಾಯಿಸಿದರು. .
ವಿವಿಧ ರೀತಿಯ ಯೋಜನಾ ಪರಿಕರಗಳ ಅಭಿವೃದ್ಧಿ, ದಕ್ಷ ಮಾನವ ಸಂಪನ್ಮೂಲ ಮತ್ತು ಸಾಮರ್ಥ್ಯ ವರ್ಧನೆಯಂತಹ ಕ್ಷೇತ್ರಗಳಲ್ಲಿ ಅವರು ವಹಿಸಬಹುದಾದ ಪಾತ್ರವನ್ನು ಹೈಲೈಟ್ ಮಾಡುವಾಗ ವೆಬಿನಾರ್ ನಲ್ಲಿ ಭಾಗವಹಿಸಿದ ತಜ್ಞರು ಹೊಸ ಆಲೋಚನೆಗಳೊಂದಿಗೆ ಮುಂಬರಲು ವಿನಂತಿಸಿದರು.
ಭಾರತದಲ್ಲಿ ಸಾವಿರಾರು ಟನ್ ಪುರಸಭೆಯ ತ್ಯಾಜ್ಯಗಳಾದ ಬ್ಯಾಟರಿ ತ್ಯಾಜ್ಯ, ವಿದ್ಯುತ್ ತ್ಯಾಜ್ಯ, ಆಟೋಮೊಬೈಲ್ ತ್ಯಾಜ್ಯ, ಟೈರುಗಳು ಮತ್ತು ಪ್ರತಿದಿನ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡಲು ಬಳಸಲಾಗುತ್ತಿದೆ. ಈ ಕ್ರಮವನ್ನು ಮೊದಲೇ ತೆಗೆದುಕೊಂಡಿದ್ದರೆ ಭಾರತದ ನಗರಗಳ ಅಂಚುಗಳು ಕಸದ ಪರ್ವತಗಳಿಂದ ತುಂಬುತ್ತಿರಲಿಲ್ಲ ಎಂದು ಹೇಳಿದರು.
ನಗರ ಮೂಲಸೌಕರ್ಯಗಳನ್ನು ಒದಗಿಸುವ ಅಗತ್ಯತೆ ಜೊತೆಗೆ ಟೈರ್ -2 ಮತ್ತು ಟೈರ್ -3 ನಗರಗಳ ಅಭಿವೃದ್ಧಿಗೆ ಹೂಡಿಕೆ ಮಾಡುವ ಕುರಿತು ಒತ್ತಿ ಹೇಳಿದರು. ಅಲ್ಲದೆ “ನಮ್ಮ ಹೊಸ ನಗರಗಳು ಕಸ-ಮುಕ್ತ, ನೀರು ಸುರಕ್ಷಿತ ಮತ್ತು ಹವಾಮಾನ-ನಿರೋಧಕವಾಗಿರಬೇಕು” ಎಂದು ಪ್ರಧಾನಿ ಮೋದಿ ವಿವರಿಸಿದ್ದಾರೆ.