ಜನಸಂಖ್ಯೆ ಹೆಚ್ಚಿಸೋಕೆ ಬಾಲಕರ ಮೇಲೆ ಐಸಿಸ್‌ ಮಹಿಳೆಯರಿಂದ ಲೈಂಗಿಕ ದೌರ್ಜನ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಐಸಿಸ್‌ ಉಗ್ರರ ಸೋಲಿನ ನಂತರ ಸಿರಿಯಾದ ರಕ್ಷಣಾ ಶಿಬಿರಗಳಲ್ಲಿರುವ ಕೆಲ ಐಸಿಸ್‌ ಮಹಿಳೆಯರು ತಮ್ಮ ಇಸ್ಲಾಮಿಕ್‌ ಜನಸಂಖ್ಯೆಯನ್ನು ಹೆಚ್ಚಿಸುವ ದುರುದ್ದೇಶದಿಂದ ಅಲ್ಲಿನ ಹದಿಹರೆಯದ ಬಾಲಕರ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಘಟನೆಗಳು ಈಗ ಬೆಳಕಿಗೆ ಬಂದಿವೆ. 13 ವರ್ಷದ ಪುಟ್ಟ ಬಾಲಕರ ಬಳಿ ಲೈಂಗಿಕ ಸಂಬಂಧ ಬೆಳೆಸಿ ತಮ್ಮನ್ನು ಗರ್ಭವತಿಯನ್ನಾಗಿಸುವಂತೆ ಕೆಲವು ಕಟ್ಟರ್‌ ಐಸಿಸ್‌ ಮಹಿಳೆಯರು ರಕ್ಷಣಾ ಶಿಬಿರದಲ್ಲಿ ಒತ್ತಾಯಿಸುತ್ತಿದ್ದಾರೆ. ಈಶಾನ್ಯ ಸಿರಿಯಾದ ರಕ್ಷಣಾ ಶಿಬಿರ ಅಲ್-ಹೌಲ್‌ನಲ್ಲಿ ಅಹ್ಮತ್ ಮತ್ತು ಹಮೀದ್ ಎಂಬ ಇಬ್ಬರು ಬಾಲಕರು ಅಲ್ಲಿನ ಭದ್ರತಾ ಸಿಬ್ಬಂದಿಯ ಬಳಿ ʼನಮ್ಮನ್ನು ಮಹಿಳೆಯರು ಪೀಡಿಸುತ್ತಿದ್ದಾರೆ, ದಯವಿಟ್ಟು ಬಿಡಿಸಿʼ ಎಂದು ವಿನಂತಿಸಿಕೊಂಡಿದ್ದಾರೆ. ಈ ಘಟನೆಯ ನಂತರ ತನಿಖೆ ನಡೆಸಿದಾಗ ಈ ಕರಾಳತೆ ಬಯಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

2019ರಲ್ಲಿ ಐಸಿಸ್‌ ಉಗ್ರರ ಸೋಲಿನ ನಂತರ ಸುಮಾರು 8 ಸಾವಿರದಷ್ಟು ಐಸಿಸ್ ಮಹಿಳೆಯರು ಮತ್ತು ಮಕ್ಕಳನ್ನು ಸಿರಿಯನ್‌ ಸರ್ಕಾರವು ಬಂಧಿಸಿದೆ. ಬಂಧಿತರಾದ ಐಸಿಸ್‌ ನ ವಯಸ್ಕ ಪುರುಷರನ್ನು ಪ್ರತ್ಯೇಕ ಶಿಬಿರಗಳಲ್ಲಿ ಇರಿಸಲಾಗಿದೆ. ಬಂಧಿತ ಮಹಿಳೆಯರಲ್ಲಿ ಕೆಲವರು ಐಸಿಸ್‌ ಕುರಿತಾಗಿ ಋಣಾತ್ಮಕ ಭಾವನೆ ತಳೆದಿದ್ದಾರೆ, ಆದರೆ ಇನ್ನುಳಿದ ಕೆಲವರು ಕಟ್ಟರ್‌ ಐಸಿಸ್‌ ವಾದಿಗಳಾಗಿದ್ದು ತಮ್ಮ ಇಸ್ಲಾಮಿಕ್‌ ಸ್ಟೇಟ್‌ ಧ್ಯೇಯೋದ್ದೇಶಗಳಿಗೇ ಬದ್ಧರಾಗಿದ್ದಾರೆ. ಹೀಗಾಗಿ ಜನಸಂಖ್ಯೆಯನ್ನು ಹೆಚ್ಚಿಸೋಕೆ ಐಸಿಸ್‌ ಮಹಿಳೆಯರು ಅಲ್ಲಿ ವಯಸ್ಕ ಪುರುಷರು ಇಲ್ಲದ ಕಾರಣ 13-14 ರ ಹದಿಹರೆಯದ ಬಾಲಕರನ್ನು ಬಳಸಿಕೊಂಡು ಗರ್ಭವತಿಯಾಗುತ್ತಿದ್ದಾರೆ.

ಅಹ್ಮತ್ ಮತ್ತು ಹಮೀದ್ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಇನ್ನೂ ಹಲವಾರು ಬಾಲಕರು ಇದೇ ರೀತಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ವರದಿಯೊಂದರ ಪ್ರಕಾರ ಒಬ್ಬ ಹುಡುಗನೊಂದಿಗೆ ಕೆಲವೇ ದಿನಗಳಲ್ಲಿ ಎಂಟು ಮಹಿಳೆಯರು ಸಂಬಂಧ ಬೆಳೆಸಿದ್ದಾರೆ. ಇದಲ್ಲದೇ ಈ ಮಹಿಳೆಯರು ತಮ್ಮ ಉದ್ದೇಶವನ್ನು ಸಫಲವಾಗಿಸಲು ಬಾಲಕರಿಗೆ ಉದ್ದೀಪನ ಮದ್ದುಗಳನ್ನು ನೀಡುತ್ತಿದ್ದು, ಕೆಲ ಬಾಲಕರು ಈ ಮದ್ದುಗಳಿಂದ ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ.

ISIS women force boys as young as 13 to impregnate them to increase Islamic population: Reports

ಈ ಕುರಿತು ಅಲ್ಲಿನ ಸರ್ಕಾರ ತನಿಖೆ ನಡೆಸಿದಾಗ ಶಿಬಿರದಲ್ಲಿ ಹಲವಾರು ಗರ್ಭಿಣಿಯರು ಇರುವುದು ಪತ್ತೆಯಾಗಿದೆ. ಅವರು ಸುರಂಗಗಳಲ್ಲಿ ಬಚ್ಚಿಟ್ಟಿದ್ದ ಕೆಲ ಬಾಲಕರನ್ನು ರಕ್ಷಿಸಲಾಗಿದೆ. ಕ್ಯಾಂಪ್ ಅಲ್ ಹಾಲ್‌ನಲ್ಲಿರುವ ಕೆಲವು ISIS ಮಹಿಳೆಯರು ಶಿಬಿರದ ಅಧಿಕೃತ ವೈದ್ಯಕೀಯ ಸಿಬ್ಬಂದಿಯ ಸಹಾಯವಿಲ್ಲದೆ, ಈ ಹಿಂದೆ ಐಸಿಸ್‌ ಕ್ಯಾಂಪ್‌ ನಲ್ಲಿ ದಾದಿಯರಾಗಿ ಕೆಲಸ ಮಾಡಿದ್ದ ಕೆಲ ಮಹಿಳೆಯರ ಸಹಾಯದಿಂದ ಮಗುವಿಗೆ ಜನ್ಮವನ್ನೂ ನೀಡಿದ್ದಾರೆ ಎನ್ನಲಾಗಿದೆ.

ಸಿರಿಯಾದ ಈಶಾನ್ಯ ಭಾಗದಲ್ಲಿರುವ ಇನ್ನೊಂದು ಶಿಬಿರ ಅಲ್-ರೋಜ್‌ನಲ್ಲಿಯೂ ಕೂಡ ಈ ರೀತಿ ಹದಿಹರೆಯದ ಬಾಲಕರ ಮೇಲೆ ಶೋಷಣೆಗಳಾಗಿರುವ ಘಟನೆಗಳು ನಡೆದಿರುವುದು ವರದಿಯಾಗಿದೆ. ಈ ಹದಿಹರೆಯದವರ ತಾಯಂದಿರು ತಮ್ಮ ಮಕ್ಕಳನ್ನು ಈ ಮಹಿಳೆಯರಿಂದ ದೂರವಿಡಲು ಬೇರೆಡೆಗೆ ವರ್ಗಾಯಿಸುವಂತೆ ವಿನಂತಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ವಿಶ್ವಸಂಸ್ಥೆಯು ಸಿರಿಯಾವನ್ನು ಟೀಕಿಸಿದೆ. ಆದರೆ ಸಿರಿಯಾ ಈ ಎಲ್ಲ ಹದಿರಹರೆಯದವರನ್ನೂ ರಕ್ಷಿಸಿ ಅವರನ್ನು ಸುರಕ್ಷಿತವಾಗಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ ಎಂಬುದನ್ನು ಮೂಲಗಳ ವರದಿ ಉಲ್ಲೇಖಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!