RR VS GT ಕದನಕ್ಕೂ ಮುನ್ನ… ಆರೆಂಜ್‌ – ಪರ್ಪಲ್‌ ಕ್ಯಾಪ್‌ ಯಾರದ್ದು? ಟಾಪ್‌ ಟೀಮ್‌ ಯಾವ್ದು ನೋಡಿಬಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
15 ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಅಭಿಮಾನಿಗಳಿಗೆ ರಸದೌತಣ ಉಣಬಡಿಸುತ್ತಿದೆ. ಹರಾಜಿನಲ್ಲಿ ಉತ್ತಮ ಆಟಗಾರರಿಗೆ ಮಣೆ ಹಾಕಿದ ತಂಡಗಳು ಅರ್ಹವಾಗಿಯೇ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿ ಮಿಂಚುತ್ತಿವೆ. ಅದರೆ ಅಚ್ಚರಿಯ ವಿಚಾರವೆಂದರೆ ಇಷ್ಟು ವರ್ಷಗಳ ಕಾಲ ಟೂರ್ನಿಯ ಪ್ರಾರಂಭದಲ್ಲಿಯೇ ಅಬ್ಬರಿಸುತ್ತಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಅಂಕಪಟ್ಟಿಯಲ್ಲಿ ತಳ ಕಂಡಿವೆ. ಯಾವ್ಯಾವ ತಂಡಗಳು ಅಂಕಪಟ್ಟಿಯಲ್ಲಿ ಯಾವ ಸ್ಥಾನಗಳಲ್ಲಿವೆ ಎಂಬುದರ ಮಾಹಿತಿ ಇಲ್ಲಿದೆ.
1. ಸಂಜು ಸ್ಯಾಮ್ಸನ್‌ ಕ್ಯಾಪ್ಟನ್ಸಿಯ ರಾಜಸ್ಥಾನ್‌ ರಾಯಲ್ಸ್‌ ಈ ಬಾರಿ ಭರ್ಜರಿ ಪ್ರದರ್ಶನ ತೋರುತ್ತಿದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ತಂಡವು ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವುಗಳೊಂದಿಗೆ 6 ಅಂಕ ಕಲೆಹಾಕಿದೆ. (ರನ್‌ ರೇಟ್‌+0.951).
2.ಐದು ಪಂದ್ಯಗಳಲ್ಲಿ ಮೂರು ಗೆಲುವು ಕಂಡಿರುವ ಕೊಲ್ಕತ್ತಾ ನೈಟ್‌ ರೈಡರ್ಸ್‌ ಸಹ ಆರು ಅಂಕಗಳೊಂದಿಗೆ 2 ನೇ ಸ್ಥಾನದಲ್ಲಿದೆ( ರನ್‌ ರೇಟ್‌+0.446)
3.ಪಂಜಾಬ್‌ ಕಿಂಗ್ಸ್‌ ಸಹ 5 ರಲ್ಲಿ 3 ಗೆಲುವಿನೊಂದಿಗೆ ಮೂರನೇ ಸ್ಥಾನದಲ್ಲಿದೆ(+0.239)
4. ಹೊಸತಂಡ ಲಕ್ನೋ ಸೂಪರ್‌ ಜೈಂಟ್ಸ್‌ ಸಹ 5ರಲ್ಲಿ ಮೂರು ಗೆದ್ದು ನಾಲ್ಕನೇ ಸ್ಥಾನದಲ್ಲಿದೆ(+0.174)
5.ಹಾರ್ದಿಕ್‌ ಪಾಂಡ್ಯ ನೇತೃತ್ವದ ಗುಜರಾತ್‌ ಟೈಟಾನ್ಸ್ ನಾಲ್ಕರಲ್ಲಿ ಒಂದು ಪಂದ್ಯ ಸೋಲು 6 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. (ರನ್‌ ರೇಟ್‌ +0.097)
‌6.ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 5 ಪಂದ್ಯಗಳಲ್ಲಿ 3 ಗೆಲುವು 2 ಸೋಲುಗಳೊಂದಿಗೆ 6 ಅಂಕ ಕಲೆಹಾಕಿದೆ.( ರನ್‌ ರೇಟ್‌ +0.006)
7.ಎರಡು ಸೋಲು, ಎರಡು ಗೆಲುವು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ 7 ನೇ ಸ್ಥಾನದಲ್ಲಿದೆ.( +0.476)
8. ಸನ್‌ ರೈಸರ್ಸ್‌ ಹೈದರಾಬಾದ್‌ ಸಹ ನಾಲ್ಕರಲ್ಲಿ ಎರಡನ್ನು ಗೆಲ್ಲುವ ಮೂಲಕ 4 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ( -0.501)
9.ಐದರಲ್ಲಿ 4 ಸೋಲು ಕಂಡಿರುವ ಚೆನೈ ಸೂಪರ್‌ ಕಿಂಗ್ಸ್‌ 2 ಅಂಕಗಳನ್ನು ಮಾತ್ರವೇ ಕಲೆಹಾಕಿ 9 ನೇ ಸ್ಥಾನದಲ್ಲಿದೆ. (-0.745)
10.ಐದಕ್ಕೆ ಐದೂ ಪಂದ್ಯಗಳನ್ನೂ ಸೋಲುವ ಮೂಲಕ ಮುಂಬೈ ಇಂಡಿಯನ್ಸ್‌ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿದೆ. (-1.072)

ಪರ್ಪಲ್‌ ಕ್ಯಾಪ್‌ ಶೂರರು ಇವರೇ..
ನಾಲ್ಕು ಪಂದ್ಯಗಳಲ್ಲಿ 11 ವಿಕೆಟ್‌ ಕಬಳಿಸಿರುವ ಯಜುವೇಂದ್ರ ಚಾಹಲ್‌ ಅಗ್ರಸ್ಥಾನ ಪಡೆದಿದ್ದಾರೆ. ಕೆಕೆಆರ್ ನ ಉಮೇಶ್‌ ಯಾದವ್‌ (10), ಡೆಲ್ಲಿಯ ಕುಲ್ದೀಪ್‌ ಯಾದವ್‌ (10), ಆರ್ಸಿಬಿಯ ವನಿಂದು ಹಸರಂಗ(10), ಎಸ್‌ ಆರ್‌ ಎಚ್‌ ನ ಟಿ.ನಟರಾಜನ್‌ (8) ನಂತರದ ಸ್ಥಾನಗಳಲ್ಲಿದ್ದಾರೆ.

ಆರೆಂಜ್ ಕ್ಯಾಪ್‌ ರೇಸ್‌ ನಲ್ಲಿರುವವರು..
ರಾಜಸ್ಥಾನದ ಆರಂಭಿಕ ಜೋಸ್‌ ಬಟ್ಲರ್‌ 218 ರನ್‌ ಗಳೊಂದಿಗೆ ಆರೆಂಜ್ ಕ್ಯಾಪ್‌ ಪಟ್ಟಿಯಲ್ಲಿ ಅಗ್ರಸ್ಥಾನ ದಲ್ಲಿದ್ದಾರೆ. ಸಿಎಸ್ಕೆ ಯ ಶಿವಂ ದೂಬೆ 207 ರನ್‌ ಗಳೊಂದಿಗೆ ದ್ವಿತೀಯ, ಪಂಜಾನ್‌ ನ ಶಿಖರ್‌ ಧವನ್‌ 197 ರನ್‌ ಗಳೊಂದಿಗೆ ತೃತೀಯ, ಸಿಎಸ್ಕೆಯ ರಾಬಿನ್‌ ಉತ್ತಪ್ಪ 194 ರನ್‌ ಕಲೆಹಾಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!