2022-23ನೇ ಸಾಲಿನಲ್ಲಿ ದಾಖಲೆಯ ಆದಾಯ ಗಳಿಸಿದ ಭಾರತೀಯ ರೈಲ್ವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

2022-23ನೇ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆಯು ₹2.40 ಲಕ್ಷ ಕೋಟಿಗಳಷ್ಟು ದಾಖಲೆಯ ಆದಾಯವನ್ನು ಗಳಿಸಿದೆ ಎಂದು ರೈಲ್ವೆ ಸಚಿವಾಲಯವು ಘೋಷಿಸಿದೆ.

ಪ್ರಸಕ್ತ ಸಾಲಿನ ಆದಾಯವು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ರೂ.49,000 ಕೋಟಿ ಆದಾಯ ಏರಿಕೆಯಾಗಿದೆ. ಈ ಏರಿಕೆಯು ಶೇ.25ರಷ್ಟು ಬೆಳವಣಿಗೆಯನ್ನು ಪ್ರತಿಫಲಿಸಿದೆ ಎಂದು ಸಚಿವಾಲಯವು ತಿಳಿಸಿದೆ.

2022-23 ರಲ್ಲಿ ಸರಕು ಸಾಗಣೆ ಆದಾಯ ಕೂಡ ರೂ 1.62 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅಂದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು 15 ಪ್ರತಿಶತದಷ್ಟು ಏರಿಕೆಯಾಗಿದೆ. ಭಾರತೀಯ ರೈಲ್ವೆಯ ಪ್ರಯಾಣಿಕರ ಸಂಚಾರದಿಂದ ಬಂದ ಆದಾಯವು 61 ಶೇಕಡಾ ವೃದ್ಧಿಸಿದೆ. ಅಂದ್ರೆ 63,300 ಕೋಟಿ ರೂಗೆ ತಲುಪಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ.

ಮೂರು ವರ್ಷಗಳ ನಂತರ, ರೈಲ್ವೆಯು ಪಿಂಚಣಿ ವೆಚ್ಚವನ್ನು ಸಂಪೂರ್ಣವಾಗಿ ಪೂರೈಸಲು ಸಾಧ್ಯವಾಯಿತು. ಆದಾಯಗಳಲ್ಲಿನ ಹೆಚ್ಚಳ ಮತ್ತು ಬಿಗಿಯಾದ ವೆಚ್ಚ ನಿರ್ವಹಣೆಯಿಂದ ಕಾರ್ಯಾಚರಣೆ ಅನುಪಾತದಲ್ಲಿ ಶೇ.98.14ರಷ್ಟು ಆದಾಯ ಗಳಿಸಲು ಸಾಧ್ಯವಾಗಿದ್ದು, ಇದು ರೈಲ್ವೆ ವೆಚ್ಚದ ಗುರಿಯೊಳಗಿದೆ.

ಎಲ್ಲಾ ಆದಾಯ ವೆಚ್ಚಗಳನ್ನು ಪೂರೈಸಿದ ನಂತರ ರೈಲ್ವೆ ಇಲಾಖೆಯು ತನ್ನ ಆಂತರಿಕ ಸಂಪನ್ಮೂಲಗಳಿಗಾಗಿ 3,200 ಕೋಟಿ ರೂ. ಬಂಡವಾಳ ಉತ್ಪಾದಿಸಲು ಸಾ‍‍ಧ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!