ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆ ಅಥವಾ ಯಾವುದೋ ಕಾರಣದಿಂದ ಸಮಯಕ್ಕೆ ಬರಬೇಕಾಗಿದ್ದ ರೈಲು ಕೊನೆ ಕ್ಷಣದಲ್ಲಿ ರದ್ದಾಗಿದೆ. ಈ ರೀತಿಯಾದಾಗ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಟಿಕೆಟ್ ಹಣ ಮರುಪಾವತಿ ಮಾತ್ರ ಮಾಡುತ್ತದೆ. ಪ್ರಯಾಣಿಕರು ಬೇರೆ ಮಾರ್ಗದ ಮೂಲಕ ತಮ್ಮ ಪ್ರಯಾಣವನ್ನು ಬೆಳೆಸಬೇಕಾಗುತ್ತದೆ. ಆದರೆ ರೈಲ್ವೆ ಇಲಾಖೆ ನಿನ್ನೆ ಮಾಡಿದ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಐಐಟಿ ಮದ್ರಾಸ್ನ ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿ ಸತ್ಯಂ ಗದ್ವಿ ಗುಜರಾತ್ನ ಏಕತಾ ನಗರ ರೈಲು ನಿಲ್ದಾಣದಿಂದ ವಡೋದರಾಗೆ ಟಿಕೆಟ್ ಕಾಯ್ದಿರಿಸಿದ್ದಾರೆ. ಭಾರೀ ಮಳೆಯಿಂದಾಗಿ ಹಲವು ರೈಲುಗಳನ್ನು ಇಲಾಖೆ ರದ್ದುಗೊಳಿಸಲಾಗಿದೆ. ಸತ್ಯ ಟಿಕೆಟ್ ಕಾಯ್ದಿರಿಸಿದ ರೈಲು ಕೂಡ ರದ್ದಾಗಿದ್ದು, ಯಾವುದೋ ಅವಸರದಲ್ಲಿದ್ದ ವಿದ್ಯಾರ್ಥಿಗೆ ಈ ಪ್ರಯಾಣ ತುಂಬಾ ಮುಖ್ಯವಾದ್ದರಿಂದ ಇಲಾಖೆ ಮುತುವರ್ಜಿ ವಹಿಸಿ ಕಾರಿನ ಸೇವೆ ಒದಗಿಸಿದೆ. ಎರಡು ಗಂಟೆಯ ಪ್ರಯಾಣವಾದರೂ ಕಾರಿನಲ್ಲಿಯೇ ವಿದ್ಯಾರ್ಥಿಯನ್ನು ವಡೋದರಾಗೆ ತಲುಪಿಸಿದರು. ರೈಲ್ವೆ ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ಸತ್ಯ ಧನ್ಯವಾದ ಹೇಳಿದ್ದಾರೆ.
“ಮಳೆಯಿಂದಾಗಿ ನಾನು ಪ್ರಯಾಣಿಸಬೇಕಿದ್ದ ರೈಲು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಯಿತು. ಏಕತಾ ನಗರ ರೈಲ್ವೆ ಸಿಬ್ಬಂದಿ ಕೂಡಲೇ ಸ್ಪಂದಿಸಿ ನನಗೆ ಕಾರಿನ ವ್ಯವಸ್ಥೆ ಮಾಡಿದರು. ಅಧಿಕಾರಿಗಳು ರೈಲ್ವೆ ಪ್ರಯಾಣಿಕರಿಗೆ ಎಷ್ಟು ಆದ್ಯತೆ ನೀಡುತ್ತಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ,” ನನಗೆ ಸಹಾಯ ಮಾಡಿದ ಅಧಿಕಾರಿಗಳಿಗೆ ಧನ್ಯವಾದ ಎಂದರು.
पश्चिम रेलवे के चाँदोद – एकता नगर रेल खंड के क्षतिग्रस्त होने के कारण रेल यातायात बंद होने से 20920 एकतानगर- एमजीआर चेन्नई सेंट्रल के एकता नगर – वडोदरा के बीच निरस्त होने के कारण इस ट्रेन के एकतानगर से एकमात्र यात्री को कार से वडोदरा पहुँचाया गया @WesternRly @RailMinIndia pic.twitter.com/6kzLaxCYwu
— DRM Vadodara (@DRMBRCWR) July 13, 2022