ಸೆಪ್ಟೆಂಬರ್‌ ನಲ್ಲಿ ಅತಿ ಹೆಚ್ಚು ಸರಕುಸಾಗಣೆ ದಾಖಲಿಸಿದ ಭಾರತೀಯ ರೇಲ್ವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತೀಯ ರೈಲ್ವೇಯು ಸೆಪ್ಟೆಂಬರ್ ತಿಂಗಳಿನಲ್ಲಿ ಅತ್ಯುತ್ತಮ ಮಾಸಿಕ ಸರಕು ಸಾಗಣೆಯನ್ನು ದಾಖಲಿಸಿದ್ದು 115.80ಮೆಟ್ರಿಕ್‌ ಟನ್‌ ನಷ್ಟು ಸರಕು ಸಾಗಣೆ ನಿರ್ವಹಿಸಿದೆ. ಇದು ಹಿಂದಿನ ವರ್ಷದ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ದಾಖಲಾದ ಅಂಕಿ ಅಂಶಗಳಿಗಿಂತ 9.15% ದಷ್ಟು ಬೆಳವಣಿಗೆಯಾಗಿದೆ. ಇದರೊಂದಿಗೆ, ಭಾರತೀಯ ರೈಲ್ವೇಯು ಸತತವಾಗಿ 25 ತಿಂಗಳುಗಳ ಅತ್ಯುತ್ತಮ ಮಾಸಿಕ ಸರಕು ಲೋಡಿಂಗ್ ಅನ್ನು ಹೊಂದಿದೆ.

ರೈಲ್ವೇಯು ಕಲ್ಲಿದ್ದಲಿನಲ್ಲಿ 6.8 ಮೆಟ್ರಿಕ್‌ ಟನ್ ಹೆಚ್ಚಳವನ್ನು ಸಾಧಿಸಿದೆ, ನಂತರ ಕಬ್ಬಿಣದ ಅದಿರಿನಲ್ಲಿ 1.2 ಮತ್ತು ಇತರ ಸರಕುಗಳಲ್ಲಿ 1.22 ಮೆಟ್ರಿಕ್‌ ಟನ್, ಸಿಮೆಂಟ್ ಮತ್ತು ಕ್ಲಿಂಕರ್‌ನಲ್ಲಿ 0.4 ಮೆಟ್ರಿಕ್‌ ಟನ್ ಮತ್ತು ರಸಗೊಬ್ಬರಗಳಲ್ಲಿ 0.3 ಮೆಟ್ರಿಕ್‌ ಟನ್‌ ಹೆಚ್ಚಳವನ್ನು ಸಾಧಿಸಿದೆ ಎಂದು ಪಿಐಬಿ ವರದಿ ತಿಳಿಸಿದೆ.

ಇನ್ನೊಂದು ಪ್ರಮುಖ ಅಂಶವೆಂದರೆ 2022-23ನೇ ಆರ್ಥಿಕ ವರ್ಷದಲ್ಲಿ ಆಟೋಮೊಬೈಲ್‌ ವಲಯದ ಸಾಗಣೆಗಳು ಹೆಚ್ಚಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1575 ರೇಕ್‌ಗಳಷ್ಟನ್ನು ಸಾಗಿಸಲಾಗಿತ್ತು. ಆದರೆ ಈ ವರ್ಷ 2712 ರೇಕ್‌ಗಳನ್ನು ಸಾಗಿಸಲಾಗಿದ್ದು 72.2ಶೇಕಡಾದಷ್ಟು ಬೆಳವಣಿಗೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!