ಭಾರತೀಯ ಸಿಖ್‌ ಮಹಿಳೆ ಈಗ ಅಮೆರಿಕದ ನ್ಯಾಯಾಧೀಶೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಭಾರತೀಯರು ತನ್ನ ಎಲ್ಲ ಕ್ಷೇತ್ರದಲ್ಲೂ ಅಪಾರ ಸಾಧನೆ ಮಾಡುವ ಮೂಲಕ ವಿಶ್ವದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ.

ಇದೀಗ ಈ ಸಾಲಿಗೆ ಭಾರತೀಯ ಮೂಲದ ಸಿಖ್ ಮಹಿಳೆ ಮನ್‌ಪ್ರೀತ್ ಮೋನಿಕಾ ಸಿಂಗ್ ಸೇರ್ಪಡೆಯಾಗಿದ್ದಾರೆ. ಇವರು ಯುಎಸ್‌ನ (US) ಹ್ಯಾರಿಸ್‌ಕೌಂಟಿ ಸಿವಿಲ್ ಕೋರ್ಟ್ (Harris County Civil Court) ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

1970ರಲ್ಲಿ ಮೋನಿಕಾ ಸಿಂಗ್ ಅವರ ಪೋಷಕರು ಯುಎಸ್‌ಗೆ (US) ವಲಸೆ ಬಂದು, ಹೂಸ್ಟನ್‌ನಲ್ಲಿ ನೆಲೆಸಿದ್ದರು. ಹಾಗಾಗಿ ಮೋನಿಕಾ ಸಿಂಗ್ ಹುಟ್ಟಿನಿಂದ ಯುಎಸ್‌ನಲ್ಲೇ ಬೆಳೆದರು. ಈಗ ಅವರಿಗೆ ಪತಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಕಳೆದ 20 ವರ್ಷಗಳಿಂದ ವಿಚಾರಣಾ ವಕೀಲರಾಗಿದ್ದ ಮೋನಿಕಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಲವು ನಾಗರಿಕ ಹಕ್ಕುಗಳ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದರು. ಇದೀಗ ಸಿವಿಲ್ ಕೋರ್ಟ್‌ನ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದಕ್ಷಿಣ ಏಷ್ಯಾದ ನ್ಯಾಯಾಧೀಶರಾದ ಭಾರತೀಯ-ಅಮೆರಿಕನ್ ನ್ಯಾಯಾಧೀಶ ರವಿ ಸ್ಯಾಂಡಿಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಇದು ನನಗೆ ಬಹಳ ಮಹತ್ವದ್ದಾಗಿದೆ. ಏಕೆಂದರೆ ನಾನು ಹೂಸ್ಟನ್ ಟೌನ್‌ನಿಂದ ಪ್ರತಿನಿಧಿಸಿದ್ದೆ. ನನಗೆ ತುಂಬಾ ಸಂತೋಷವಾಗಿದೆ ಎಂದು ಮೋನಿಕಾ ಸಿಂಗ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!