ತುನಿಷಾ ಸಾವಿನ ಪ್ರಕರಣ: ಬಾಯ್ ಫ್ರೆಂಡ್ ಶಿಜಾನ್ ಡ್ರಗ್ಸ್ ವ್ಯಸನಿ ಆಗಿದ್ದ ಎಂದ ತಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತುನಿಷಾ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ತನ್ನ ಮಗಳು ಸಾವಿಗೆ ಅವಳ ಬಾಯ್ ಫ್ರೆಂಡ್ ಶಿಜಾನ್ ಕಾರಣವೆಂದು ಮತ್ತೊಮ್ಮೆ ತುನಿಷಾ ತಾಯಿ ಆರೋಪ ಮಾಡಿದ್ದಾರೆ.

ಶಿಜಾನ್ ಡ್ರಗ್ಸ್ ವ್ಯಸನಿ ಆಗಿದ್ದ. ಅದನ್ನು ಸಂಭಾಳಿಸಲೆಂದೇ ನನ್ನ ಮಗಳು ನಮ್ಮಿಂದ ಮೂರು ತಿಂಗಳಲ್ಲಿ ಮೂರು ಲಕ್ಷ ರೂಪಾಯಿ ಪಡೆದಿದ್ದಳು. ಅವನ ಆ ಚಟಕ್ಕೆ ನನ್ನ ಮಗಳು ದುಡ್ಡಿನ ಭಾರ ಹೊರಬೇಕಿತ್ತು ಎಂದಿದ್ದಾರೆ.

ಇತ್ತ ತುನಿಷಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಸ್ವತಃ ತುನಿಷಾ ತಾಯಿಯೇ ಅವಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂದು ಮೊನ್ನೆಯಷ್ಟೇ ಶಿಜಾನ್ ಕುಟುಂಬ ಹೇಳಿಕೆ ನೀಡಿದ್ದರು.

ಈ ಮಾತಿಗೆ ತುನಿಷಾ ತಾಯಿ ಪ್ರತಿಕ್ರಿಯೆ ನೀಡಿ, ನನ್ನ ಮಗಳು ಚೆನ್ನಾಗಿಯೇ ಇದ್ದಳು. ಅವರ ಮಗ ಡ್ರಗ್ಸ್ ವ್ಯಸನಿ ಆಗಿದ್ದ ಎಂದು ತಿರುಗೇಟು ನೀಡಿದ್ದಾರೆ.

ಸದ್ಯ ತುನಿಷಾ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತನ್ನ ಮಗಳ ಸಾವಿಗೆ ಆಕೆಯ ಪ್ರಿಯಕರ ಶಿಜಾನ್ ಮತ್ತು ಆಕೆಯ ಕುಟುಂಬವೇ ಕಾರಣ. ನನ್ನ ಮಗಳನ್ನು ಅವರು ಮತಾಂತರ ಮಾಡಲು ಯತ್ನಿಸಿದ್ದರು. ಈ ಸಾವಿನ ಹೊಣೆಯನ್ನು ಅವರೇ ಹೊರಬೇಕು ಎಂದು ತುನಿಷಾ ಶರ್ಮಾ ಅವರ ತಾಯಿಯು ಆರೋಪ ಮಾಡಿದ್ದರೆ , ತುನಿಷಾ ನಮ್ಮ ಕುಟುಂಬದ ಜೊತೆ ಅನ್ಯೋನ್ಯವಾಗಿದ್ದರು. ಅವರ ತಾಯಿಯೇ ಸರಿ ಇರಲಿಲ್ಲ ಎಂದು ಶಿಜಾನ್ ಕುಟುಂಬ ಗಂಭೀರ ಆರೋಪ ಮಾಡುತ್ತಿದ್ದಾರೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!