ಕಾಶ್ಮೀರ ಪ್ರತ್ಯೇಕಿಸುವ ಬಗ್ಗೆ ಟ್ವೀಟ್‌ ಮಾಡಿದ ಹ್ಯುಂಡೈ: ಟ್ವಿಟರ್‌ನಲ್ಲಿ ಬಿಸಿಮುಟ್ಟಿಸಿದ ನೆಟ್ಟಿಗರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಹುರಾಷ್ಟ್ರೀಯ ಕಾರು ಉತ್ಪಾದಕ ಸಂಸ್ಥೆ ಹ್ಯುಂಡೈ ಮೋಟಾರ್‌ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯನ್ನು ನಿಷೇಧಿಸುವಂತೆ ನೆಟ್ಟಿಗರು ಟ್ವೀಟ್‌ ಮಾಡುತ್ತಿದ್ದಾರೆ.

ಏನಾಯ್ತು?

ಫೆ.5ರಂದು ಪಾಕಿಸ್ತಾನದಲ್ಲಿ ಕಾಶ್ಮೀರ ಐಕ್ಯತಾ ದಿನ ಎಂದು ಆಚರಿಸಲಾಗುತ್ತದೆ. ಪಾಕಿಸ್ತಾನದಲ್ಲಿಯೂ ತನ್ನ ಮಾರುಕಟ್ಟೆ ಹೊಂದಿರುವ ಹ್ಯುಂಡೈ ತನ್ನ ಪಾಕ್‌ ನ ಅಧಿಕೃತ ಡೀಲರ್‌ ನ ಟ್ವಿಟರ್‌ ಖಾತೆಯಿಂದ ಕಾಶ್ಮೀರ ಐಕ್ಯತಾ ದಿನಕ್ಕೆ ಬೆಂಬಲಿಸುವಂತೆ ಸೂಚಿಸಿ ಪೋಸ್ಟ್‌ ಮಾಡಿದೆ.

Image

ಇದನ್ನು ಗಮನಿಸಿದ ಭಾರತೀಯ ಟ್ವಿಟರ್‌ ಬಳಕೆದಾದರು #BoycottHyundai ಹ್ಯಾಷ್ ಟ್ಯಾಗ್‌ ಅಡಿಯಲ್ಲಿ ಟ್ರೆಂಡ್‌ ಮಾಡಲು ಆರಂಭಿಸಿದರು. ಇನ್ನು ಮುಂದೆ ಹ್ಯುಂಡೈ ಸಂಸ್ಥೆಯ ಯಾವುದೇ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದು ಗುಡುಗಿದರು.

ಇಷ್ಟಾದ ಕೂಡಲೇ ಎಚ್ಚೆತ್ತುಕೊಂಡ ಹ್ಯುಂಡೈ ಇಂಡಿಯಾ ಭಾರತೀಯರಿಗೆ ಕ್ಷಮೆ ಕೇಳಿದೆ. ರಾಷ್ಟ್ರೀಯತೆಯನ್ನು ಗೌರವಿಸುವ ನೀತಿಯನ್ನು ಪಾಲಿಸುವುದಾಗಿ ಘೋಷಿಸಿದ್ದು, ಭಾರತದ ಮಾರುಕಟ್ಟೆಗೆ ಹ್ಯುಂಡೈ ಕಳೆದ 25 ವರ್ಷಗಳಿಂದ ಬದ್ಧವಾಗಿದೆ ಎಂದು ಪುನರುಚ್ಚರಿಸಿದೆ.

ಹ್ಯುಂಡೈಗೆ ಭಾರತ ಎರಡನೇ ತವರಾಗಿದೆ. ಹೀಗಾಗಿ ಸೂಕ್ಷ್ಮ ವಲಯದ ಕುರಿತು ಇಲ್ಲ ಸಲ್ಲದ ಮಾತಿಗೆ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದ್ದೇವೆ. ಅಂತಹ ಯಾವುದೇ ಮಾತು, ಹೇಳಿಕೆಯನ್ನು ಹ್ಯುಂಡೈ ಇಂಡಿಯಾ ಬಲವಾಗಿ ಖಂಡಿಸುತ್ತದೆ. ನಮ್ಮ ಬದ್ಧತೆಯ ಪ್ರಕಾರ ಭಾರತ ಹಾಗೂ ಭಾರತೀಯರ ಏಳಿಗೆಗಾಗಿ ಹ್ಯುಂಡೈ ಇಂಡಿಯಾ ಶ್ರಮಿಸಲಿದೆ ಎಂದು ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!