ಹೊಸದಿಗಂತ ಡಿಜಿಟಲ್ ಡೆಸ್ಕ್:
ಹತ್ತು ವರ್ಷಗಳಲ್ಲಿ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ- digital public infrastructure) ಅಗಾಧ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದೆ.ಭಾರತದಲ್ಲಿ ಡಿಜಿಟಲ್ ವ್ಯವಹಾರ ಸುಗಮವಾಗಿ ನಡೆಯುತ್ತಿರುವುದನ್ನು ವಿಶ್ವ ಬ್ಯಾಂಕ್ ಶುಕ್ರವಾರ ಶ್ಲಾಘಿಸಿದೆ.
ಜಿ20 ಶೃಂಗಸಭೆಯ ಪೂರ್ವಭಾವಿಯಾಗಿ ಸಿದ್ಧಪಡಿಸಲಾದ ವಿಶ್ವಬ್ಯಾಂಕ್ನ ಜಿ20 ಜಾಗತಿಕ ಪಾಲುದಾರಿಕೆಯ (GPFI) ಸಮಗ್ರ ವರದಿಯಲ್ಲಿ ಡಿಪಿಐ ಕ್ಷೇತ್ರದಲ್ಲಿ ಭಾರತದ ಗಮನಾರ್ಹ ಪ್ರಗತಿಯನ್ನು ಅದು ಶ್ಲಾಘಿಸಿದೆ. ಕನಿಷ್ಠ 47 ವರ್ಷಗಳಲ್ಲಿ ಸಾಧಿಸಬೇಕಾದ ಗುರಿಯನ್ನು ಕೇವಲ 6 ವರ್ಷಗಳಲ್ಲಿ ಭಾರತ ಸಾಧಿಸಿದೆ ತೋರಿಸಿದೆ ಎಂದು ಪ್ರಶಂಸಿಸಿದೆ.
ಯುಪಿಐ, ಜನ್ ಧನ್, ಆಧಾರ್, ಒಎನ್ಡಿಸಿ ಹಾಗೂ CoWin ನಂತಹ ಉಪಕ್ರಮಗಳ ಜೊತೆಗೆ ಭಾರತ ಯಾವ ರೀತಿ ದೃಢವಾದ ಡಿಜಿಟಲ್ ಸಾರ್ವಜನಿಕ ಸರಕುಗಳ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದೆ ಎಂಬುದನ್ನು ವಿಶ್ವ ಬ್ಯಾಂಕ್ ವಿಶ್ಲೇಷಿಸಿದೆ.
ಭಾರತವು ಮೋದಿ ಸರಕಾರದ ನಾಯಕತ್ವದಲ್ಲಿ ಡಿಪಿಐ ಕ್ಷೇತ್ರದಲ್ಲಿ ಗಮನಾರ್ಹವಾದ ಹೆಗ್ಗುರುತನ್ನೇ ಸಾಧಿಸಿದೆ. ಈ ಡಿಜಿಟಲ್ ಉಪಕ್ರಮಗಳು ಹಣಕಾಸು ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿರುವುದ ಮಾತ್ರವಲ್ಲದೇ, ಆರ್ಥಿಕ ದಕ್ಷತೆಯನ್ನು ಸುಧಾರಿಸಿದೆ, ನವೀನ ಆಡಳಿತ ಹಾಗೂ ಡಿಜಿಟಲ್ ರೂಪಾಂತರಕ್ಕಾಗಿ ಜಾಗತಿಕ ಮಾನದಂಡವನ್ನು ರೂಪಿಸಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಡಿಪಿಐ ಕ್ಷೇತ್ರದಲ್ಲಿನ ಸುಧಾರಣೆಗಾಗಿ ಮೋದಿ ಸರ್ಕಾರ ಕೈಗೊಂಡ ಕ್ರಮಗಳು,ಪ್ರಮುಖ ಪಾತ್ರವನ್ನು ಹಾಗೂ ಅದರಲ್ಲೂ ಜ್ಯಾಮ್ ಟ್ರಿನಿಟಿ (JAM Trinity) ಮಹತ್ವವನ್ನು ವರದಿ ಒತ್ತಿ ಹೇಳಿದೆ.
ಐದು ದಶಕಗಳ ಕೆಲಸವನ್ನು ಕೇವಲ ಆರು ವರ್ಷಗಳಲ್ಲಿ ಸಾಧಿಸಿರುವ ಭಾರತದ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟಕ್ಚರ್ ವಿಧಾನ ಒಂದು ಕ್ರಾತಿಯೇ ಸರಿ. ಈ ಯಶಸ್ಸಿಗೆ ಗಮನಾರ್ಹ ಕೊಡುಗೆ ನೀಡಿದ್ದು JAM ಟ್ರಿನಿಟಿ. ಇದು 2008ರಲ್ಲಿ 25 ಶೇಕಡಾವಿದ್ದ ಹಣಕಾಸು ಸೇರ್ಪಡೆಯನ್ನು ಕಳೆದ ಆರು ವರ್ಷಗಳಲ್ಲಿ 80ಶೇಕಡಾಕ್ಕೆ ಹೆಚ್ಚಿಸಿದೆ. ಡಿಪಿಐ ಅಲ್ಲದೇ ಇದ್ದರೆ, ಈ ಪ್ರಮಾಣಕ್ಕೆ ತಲುಪಲು ಕನಿಷ್ಠ 47 ವರ್ಷಗಳು ಬೇಕಾಗಿತ್ತು. ಹಾಗಾಗಿ ಡಿಪಿಐ ಅನುಷ್ಠಾನಕ್ಕೆ ವಿಶ್ವಬ್ಯಾಂಕ್ ಧನ್ಯವಾದ ತಿಳಿಸಿದೆ.
ಈ ಬೇಳವಣಿಗೆಯಲ್ಲಿ ಡಿಪಿಐಗಳ ಪಾತ್ರ ನಿಸ್ಸಂದೇಹವಾಗಿದೆ. ಜೊತೆಗೆ ಡಿಪಿಐಗಳ ಲಭ್ಯತೆಗೆ ಪೂರಕವಾಗಿದ್ದ ಇತರ ವ್ಯವಸ್ಥೆಗಳು ಹಾಗೂ ನೀತಿಗಳು ಉದಾಹರಣೆಗೆ ರಾಷ್ಟ್ರೀಯ ನೀತಿಗಳು, ಗುರುತಿನ ಪರಿಶೀಲನೆಗಾಗಿ ಆಧಾರ್ನಂತಹವು ಕೂಡ ನಿರ್ಣಾಯಕವಾಗಿವೆ.
ಈ ಬೆಳವಣಿಗೆಯ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದು ಪ್ರಧಾನಮಂತ್ರಿ ಜನ್ ಧನ್ ಯೋಜನೆ. ಈ ಯೋಜನೆ ಪ್ರಾರಂಭವಾದ ನಂತರ ಬ್ಯಾಂಕ್ ಖಾತೆ ಹೊಂದಿರುವವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. 2015 ಮಾರ್ಚ್ನಲ್ಲಿ 147.2 ಮಿಲಿಯನ್ ಇದ್ದ ಸಂಖ್ಯೆ 2022ರ ವೇಳೆ 462 ಮಿಲಿಯನ್ಎ ಏರಿಕೆಯಾಗಿದೆ. ಅದರಲ್ಲೂ ಶೇ 56ರಷ್ಟಿದ್ದ ಖಾತೆ ಹೊಂದಿದ್ದ ಮಹಿಳೆಯರ ಸಂಖ್ಯೆ 260 ಮಿರಿಯನ್ಗೂ ಮೀರಿ ಏರಿಕೆಯಾಗಿದೆ.