ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಟಲಿಯಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನಿಂದ ಭಾರತದ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಮತ್ತು ಏಳನೇ ಶ್ರೇಯಾಂಕದ ಪ್ರಿಯಾಂಕಾ ನುಟಕ್ಕಿ ಹೊರಬಿದ್ದಿದ್ದಾರೆ.
ಪ್ರಿಯಾಂಕಾ ಧರಿಸಿದ್ದ ಜಾಕೆಟ್‌ನಲ್ಲಿ ಇಯರ್‌ಬಡ್ಸ್ ಪತ್ತೆಯಾದ ಕಾರಣ ಅವರನ್ನು ಚಾಂಪಿಯನ್‌ಶಿಪ್‌ನಿಂದ ಹೊರಗಿಟ್ಟಿದ್ದೇವೆ ಎಂದು ವಿಶ್ವಚೆಸ್ ಫೆಡರೇಶನ್ ಹೇಳಿದೆ.
ಪಂದ್ಯಾವಳಿಯಲ್ಲಿ ನಿಷೇಧಿತ ವಸ್ತುಗಳಲ್ಲಿ ಇಯರ್‌ಬಡ್ಸ್ ಕೂಡ ಇದ್ದು, ಪ್ರಿಯಾಂಕಾ ಜಾಕೆಟ್‌ನಲ್ಲಿ ಇಯರ್‌ಬಡ್ಸ್ ಸಿಕ್ಕಿದೆ. ಈ ಕಾರಣದಿಂದ ಅವರನ್ನು ಹೊರಹಾಕಲಾಗಿದೆ. ಆದರೆ ಉದ್ದೇಶಪೂರಕವಾಗಿ ಇಟ್ಟುಕೊಂಡಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ.
ಫೇರ್‌ಪ್ಲೇ ನೀತಿಗಳ ಪ್ರಕಾರ ಆಟದ ಸಮಯದಲ್ಲಿ ಇಯರ್ ಬಡ್ಸ್ ತರುವಂತಿಲ್ಲ. ಇಲ್ಲಿ ಫೇರ್‌ಪ್ಲೆ ನೀತಿ ಉಲ್ಲಂಘನೆಯಾಗಿದ್ದು, ಇಡೀ ಪಂದ್ಯಾವಳಿಯಿಂದ ಪ್ರಿಯಾಂಕಾ ಹೊರಗುಳಿಯಬೇಕಿದೆ. ಇನ್ನು ಪ್ರಿಯಾಂಕಾ ಗಳಿಸಿದ ಎಲ್ಲ ಅಂಕಗಳು ಅವರ ಪ್ರತಿಸ್ಪರ್ಧಿಗೆ ವರ್ಗಾಯಿಸಲಾಗಿದೆ.