ಅಪರಾಧಿಗಳನ್ನು ಹಿಡಿಯಲು ಮಹಿಂದ್ರಾ ಆಟೋ ಹತ್ತಿ ಹೊರಡಲಿದ್ದಾರೆ ಬ್ರಿಟನ್‌ ಪೊಲೀಸರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸಾಮಾನ್ಯವಾಗಿ ಪೊಲೀಸರು ಅಪರಾಧಿಗಳನ್ನು ಹಿಡಿಯಲು ಅತಿ ವೇಗದ ಅತ್ಯಾಧುನಿಕ ವಾಹನಗಳನ್ನು ಬಳಸುತ್ತಾರೆ. ಸಿನಿಮಾಗಳಲ್ಲಂತೂ ಕಳ್ಳರನ್ನು ಪೊಲೀಸರು ಚೇಸ್‌ ಮಾಡುವ ದೃಶ್ಯಗಳು ಅತ್ಯಂತ ರೋಚಕವಾಗಿರುತ್ತವೆ. ಅದೆಲ್ಲಾ ಒತ್ತಟ್ಟಿಗೆ ಇರಲಿ, ಅಪರಾಧಿಗಳನ್ನು ಪೊಲೀಸರು ಆಟೋದಲ್ಲಿ ಹಿಂಬಾಲಿಸುವ ಸನ್ನಿವೇಶ ಕಾಣಸಿಕ್ಕರೆ ಹೇಗಿರುತ್ತದೆ ಅಲ್ಲವೇ! ಇದು ತಮಾಷೆಯಲ್ಲ, ನಿಜ. ಬ್ರಿಟನ್ ಪೊಲೀಸರು ಇನ್ನು ಮುಂದೆ ಅಪರಾಧಿಗಳನ್ನು ಹಿಡಿಯಲು ಮಹೀಂದ್ರಾ ಆಟೋ ಹತ್ತಿ ಹೊರಡಲಿದ್ದಾರೆ.
‌ಬ್ರಿಟನ್‌ ನ ವೇಲ್ಸ್ ಕೌಂಟಿಯ ಗ್ವೆಂಟ್ ಪೋಲೀಸ್ ಇಂತಹದ್ದೊಂದು ನಿರ್ಧಾರ ಕೈಗೊಂಡಿದೆ. ಮೊನ್‌ಮೌತ್‌ಶೈರ್‌ನಲ್ಲಿರುವ ನ್ಯೂಪೋರ್ಟ್ ಮತ್ತು ಅಬರ್ಗವೆನ್ನಿ ಪ್ರದೇಶಗಳಲ್ಲಿ ಪೊಲೀಸರ ಕಾರ್ಯಾಚರಣೆಗಳಿಗೆ ನಾಲ್ಕು ಆಟೋಗಳನ್ನು ಖರೀದಿಸಲಾಗಿದೆ.
ಈ ಆಟೋ ಹತ್ತಿ ಹೊರಡಲಿರುವ ಅಧಿಕಾರಿಗಳು ಮತ್ತು ರಾಯಭಾರಿಗಳು “ಹಗಲು ಮತ್ತು ರಾತ್ರಿ” ಉದ್ಯಾನವನಗಳು, ವಾಕ್‌ವೇಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲಿದ್ದಾರೆ. ಈ ಆಟೋಗಳ  ವೇಗವನ್ನು ಗಂಟೆಗೆ 55 ಕಿಲೋಮೀಟರ್‌ಗಳಿಗೆ ಸೀಮಿತಗೊಳಿಸಲಾಗಿದೆ.
ಈ ಆಟೋಗಳನ್ನು ಜನ ಸ್ನೇಹಿಯಾಗಿ ಬಳಸಲಾಗುವುದು ಎಂದು ಗ್ವೆಂಟ್ ಪೊಲೀಸರು ಹೇಳಿದ್ದಾರೆ. ಜನರು ಆಟೋಗಳತ್ತ ಬಂದು ಅಪರಾಧಗಳನ್ನು ವರದಿ ಮಾಡಬಹುದು, ಸಹಾಯವನ್ನು ಕೋರಬಹುದು ಮತ್ತು ಅಪರಾಧ ತಡೆಗಟ್ಟುವಿಕೆ ಸಲಹೆಯನ್ನು ನೀಡಬಹುದು.
“ರಾತ್ರಿಯ ಸಮಯದಲ್ಲಿ ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ತಾವು ಅಸುರಕ್ಷಿತವಾಗಿದ್ದೇವೆ ಎಂದು ಭಾಸವಾದರೆ ಈ ಆಟೋಗಳತ್ತ ತೆರಳಲಿ ಸುರಕ್ಷತೆ ಕೋರಬಹುದು ಎಂದು ಮುಖ್ಯ ಇನ್ಸ್‌ಪೆಕ್ಟರ್ ಡಾಮಿಯನ್ ಸೌರೆ ಹೇಳಿದ್ದಾರೆ.
ಭಾರತದಲ್ಲಿ ಪ್ರಯಾಣದ ಉದ್ದೇಶದಿಂದ ಆಟೋಗಳನ್ನು ಬಳಸಲಾಗುತ್ತದೆ. ಆದರೆ ಗೈಂಟ್‌ ಪೊಲೀಸರು ಅಪರಾಧ ನಿಯಂತ್ರಣಕ್ಕಾಗಿ ನಮ್ಮ ಆಟೋಗಳನ್ನು ಬಳಸಲಿದ್ದಾರೆ. ನಾವು ಇಂತಹ ಮಹತ್ತರ ಉದ್ದೇಶದ ಭಾಗವಾಗಿರುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ” ಎಂದು ಮಹೀಂದ್ರಾ ಎಲೆಕ್ಟ್ರಿಕ್ ಟ್ವೀಟ್ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!