ಪಟಾಕಿ ಹಚ್ಚಿ ಓಡುವಾಗ ಮುಗ್ಗರಿಸಿ ಬಿದ್ದ ಶಾಸಕ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದೆಲ್ಲೆಡೆ ಅದ್ದೂರಿಯಾಗಿ ಆಚರಿಸುವ ದೀಪಾವಳಿ ಹಬ್ಬ ಬಂದೇ ಬಿಡ್ತು. ಈಗಾಗಲೇ ಹಲವೆಡೆ ಮಾರಾಟ ಶುರು ಆಗಿದೆ. ಹಬ್ಬಕ್ಕೆ ಇನ್ನೂ ದಿನಗಳು ಬಾಕಿ ಇರುವಾಗಲೇ ಪಟಾಕಿ ಶಬ್ದ ಅಲ್ಲಲ್ಲಿ ಕೇಳಿ ಬರುತ್ತಿದೆ. ಸಾಮಾನ್ಯವಾಗಿ ಹಬ್ಬ-ಹರಿದಿನ, ದೇವರ ಉತ್ಸವ, ಕ್ರೀಡಾ ಪಂದ್ಯ ಇಂತಹ ಸಮಯದಲ್ಲಿ ಪಟಾಕಿ ಸಿಡಿಸಿಉವುದು ಕಾಮನ್.‌ ಇದೇ ರೀತಿ ಪಟಾಕಿ ಸಿಡಿಸಲು ಹೋದ ಬಿಜೆಪಿ ಶಾಸಕರೊಬ್ಬರು ಪಟಾಕಿ ಹಚ್ಚಿ ಓಡುವಾಗ ಮುಗ್ಗಿರಿಸಿ ಬಿದ್ದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಿಹಾರದ ಸೋನೆಪುರ್ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರೂ ಆದ ವಿನಯ್ ಕುಮಾರ್ ಸಿಂಗ್  ತಮ್ಮ ಕ್ಷೇತ್ರ ಸೋನೆಪುರದಲ್ಲಿ ಫುಟ್ಬಾಲ್ ಪಂದ್ಯಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕರು ಪಟಾಕಿ ಸಿಡಿಸಿದರು. ಬೆಂಕಿಕಡ್ಡಿ ಹಚ್ಚಿದ ಕೂಡಲೇ ಎದ್ದು ಓಡಿದರು. ಓಡುವಾಗ ಪಾಪ…ಕಾಲು ಎಡವಿ ಮುಗ್ಗರಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!