August 27, 2026
Thursday, August 27, 2026
spot_img

ಜಿಂಬಾಬ್ವೆ ವಿರುದ್ಧ ಭಾರತ ಸೆಣಸಾಟ: ಗೆಲುವಿನ ಜೊತೆಗೆ ಕಿಶನ್‌ಗೆ ಸಿಗಲಿದೆಯೇ ಈ ಹೆಗ್ಗಳಿಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಾರೆ ಕ್ರೀಡಾಂಗಣದಲ್ಲಿ ಇಂದು ನಡೆಯಲ್ಲಿರುವ ಜಿಂಬಾಬ್ವೆ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಶುಭಮನ್ ಗಿಲ್ ಪಡೆ ಸರಣಿ ತನ್ನದಾಗಿಸಿಕೊಳ್ಳುವ ವಿಶ್ವಾಸದಲ್ಲಿದೆ. ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿರುವ ಭಾರತೀಯ ಪಡೆಗೆ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ.

ಇಶಾನ್ ಕಿಶನ್‌ಗೆ ಸುವರ್ಣ ಅವಕಾಶ

ಈ ಮಹತ್ವದ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಪ್ರಮುಖ ಸಾಧನೆ ಮಾಡಲು ಹೊಸ್ತಿಲಲ್ಲಿದ್ದಾರೆ. ಅವರು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1,500 ರನ್‌ಗಳ ಗಡಿ ತಲುಪಲು ಇನ್ನು ಕೇವಲ 2 ರನ್‌ಗಳ ಅಗತ್ಯವಿದೆ. ಈ ಸಾಧನೆ ಮಾಡಿದರೆ, ಈ ಮೈಲಿಗಲ್ಲು ತಲುಪಿದ ಭಾರತದ 11 ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಪ್ರಮುಖ ಭಾರತೀಯ ಆಟಗಾರರ ಪಟ್ಟಿ

ಇದುವರೆಗೆ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ, ಕೆ.ಎಲ್. ರಾಹುಲ್, ಶಿಖರ್ ಧವನ್, ಅಭಿಷೇಕ್ ಶರ್ಮಾ, ಎಂ.ಎಸ್. ಧೋನಿ, ಸುರೇಶ್ ರೈನಾ ಮತ್ತು ತಿಲಕ್ ವರ್ಮಾ ಈ ಸಾಧನೆ ಮಾಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ (4,231 ರನ್) ಅಗ್ರಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ (4,188 ರನ್) ದ್ವಿತೀಯ ಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಕೂಡ 2,000ಕ್ಕೂ ಹೆಚ್ಚು ರನ್‌ಗಳನ್ನು ಬಾರಿಸಿ ಮಿಂಚಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !