Monday, November 28, 2022

Latest Posts

‘ಭಾರತದ ಅಭಿವೃದ್ಧಿ ಸಂತ-ನರೇಂದ್ರ ಮೋದಿಜಿ ನಮ್ಮ ಹೆಮ್ಮೆ’

 • ಜಿ.ವೀರೇಶ್ವರ ಕರ್ಮರ್ಕರ್

  ನಮ್ಮ  ದೇಶ ಕಂಡ ಅನೇಕ ವಿಶೇಷ ವ್ಯಕ್ತಿಗಳ ಸಾಲಿನಲ್ಲಿ ವಿಶಿಷ್ಟರಲ್ಲಿ ವಿಶಿಷ್ಟರಾಗಿ ಕಂಡು ಬರುವವರಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ದಾಮೋದರ ಮೋದಿಜಿ ಯವರು ಪ್ರಾತಃಸ್ಮರಣೀಯರೇ ಸರಿ..
  “ಮೈ ನಹಿ ಖಾವೂಂಗಾ ನಹಿ ಖಾನಾದೂಂಗಾ ” ಎಂತ ಅದ್ಭುತ ಮಾತು. ಇವರ ಈ ಹೃದಯದ ಮಾತುಗಳೇ ಭ್ರಷ್ಟಾಚಾರದಿಂದ ರೋಸಿ ಹೋದ ಜನರಿಗೊಂದು ಅಮೃತ ವಚನವಾಯಿತು..ಮೋದೀಜಿ ಅವರೊಬ್ಬ ಅದ್ಭುತ ಮಾತುಗಾರ..ಕನಸುಗಾರ..ಕನಸನ್ನು ನನಸು ಮಾಡಿದ ಛಲಗಾರ.ಅಖಂಡ ಭಾರತದ ಅವರ ಕಲ್ಪನೆ ಅವರಲ್ಲಿ ಜನರಿಗೆ ವಿಶ್ವಾಸ ಇಮ್ಮಡಿಗೊಳಿಸಿತು..ಪ್ರಧಾನ ಮಂತ್ರಿಗಳಾಗಿದ್ದವರಲ್ಲಿ , ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಿಟ್ಟರೆ ಆನಂತರ ಇಡೀ ವಿಶ್ವದಲ್ಲಿ ಇಷ್ಟೊಂದು ಪ್ರಸಿದ್ಧಿ ಪಡೆದವರಲ್ಲಿ ಬಹುಶಃ ಇವರೇ ಅಗ್ರಗಣ್ಯರು. ಇಡೀ ವಿಶ್ವದಲ್ಲಿ ಅನೇಕ ಕಡೆಗಳಲ್ಲಿ ಸಂಚರಿಸಿ ಸಂಚಲನಮೂಡಿಸಿ ವಿಶ್ವದ ದೊಡ್ಡಣ್ಣ ಅಮೇರಿಕಾವೇ ರತ್ನ ಗಂಬಳಿ ಹಾಕಿ ಸ್ವಾಗತಿಸಬೇಕೆಂದರೆ ಅದೇನು ಸಾಮಾನ್ಯ ವಿಷಯವೇ..!?

  ಅಮೇರಿಕಾದಂತಹ ದೇಶದಲ್ಲಿಯೇ ಮೋದೀಜಿ ಅವರ ಬರುವಿಕೆಗಾಗಿ ಕಾತರ ಮೋದಿ ಮೋದಿ ಎಂಬ ಘೋಷಣೆ ಇಂತಹವರಲ್ಲೂ ಮೈರೋಮಾಂಚನ ಗೊಳಿಸೀತು. ಸತ್ಯ ಹೇಳುವುದಾದಲ್ಲಿ ಅವರ 56ಇಂಚು ಅಗಲದ ಎದೆಯ ಬಗ್ಗೆ ಮಾತೆತ್ತಿ ಟೀಕಿಸುವ ಕಾಂಗ್ರೆಸ್ ಪಕ್ಷದ ನೇತಾರರೇ ಅವರ ಮಾತಿನ ಮೋಡಿಗೆ ತಲೆದೂಗುತ್ತಾರೆ..ಒಂದು ಕಡೆ ಅವರ ಪ್ರಖ್ಯಾತಿ ಇನ್ನು ಮುಂದೆ ಕಾಂಗ್ರೆಸ್ಸಿಗೆ ಭವಿಷ್ಯ ಇಲ್ಲವೇನೋ ಎಂಬಂತೆ ಎದೆಯಲ್ಲಿ ನಡುಕ ಪ್ರಾರಂಭವಾಗಿತ್ತು..ಈಗಲೂ ಕಂಪನ ಇದೆ..ಅನೇಕ ಕಾಂಗ್ರೆಸ್ ನೇತಾರರೇ ನಾನಾ ಪಿಳ್ಳೆನೆವ ಹೇಳಿ ಬಿಜೆಪಿಗೆ ವಲಸೆಬರುತ್ತಾ ಇರುವುದು ಅಷ್ಟೇ ಸತ್ಯ.

  ಸಾಮಾನ್ಯ ಅಸಾಮಾನ್ಯರಾದ ನಮೋ ನಿಜವಾಗಿಯೂ ಓರ್ವ ಸಾಮಾನ್ಯರ ಮಧ್ಯೆ ಹುಟ್ಟಿಕೊಂಡ ಅಸಾಮಾನ್ಯ ವ್ಯಕ್ತಿ..ಅವರೊಬ್ಬ ಸಂತ. ಬಿಜೆಪಿ ಪಕ್ಷಕ್ಕೆ ಬಿಡಿ ಇಡೀ.ದೇಶಕ್ಕೆ ದೊರೆತ ಅನರ್ಘ್ಯ ರತ್ನ..ಇವರೇ ಒಬ್ಬ ಭಾರತ ರತ್ನವೇ. ಇವರಿಗೇ ನಾವು ಸಮಸ್ತ ಭಾರತೀಯರೇ ನಮ್ಮ ಹೃದಯಕಮಲದಲ್ಲಿ ಕೊಡಬೇಕು ಭಾರತ ರತ್ನ.
  ಅದೆಷ್ಟೋ ಬಾರೀ ಇವರ ವೈಯಕ್ತಿಕ ಜೀವನದ ವೈವಾಹಿಕ ಜೀವನವನ್ನೇ ಗುರಿಯಾಗಿಸಿ ಕಾಂಗ್ರೆಸ್ ಚುನಾವಣೆ ಸಮಯದಲ್ಲಿ ಎಳೆದು ತಂದು ಟೀಕಿಸಿದವರು ಸಹ ಅವರ ತಾಳ್ಮೆ ಸಹನೆಗೆ ದೇಶೋಧ್ದಾರದ ತುಡಿತಕ್ಕೆ ತಲೆದೂಗಿ ಆ ಅಸ್ತ್ರವನ್ನೇ ಹಿಂಪಡೆದು ಶಸ್ತ್ರ ತ್ಯಾಗ ಮಾಡಬೇಕಾಯಿತು. ಈ ಬಗ್ಗೆ ಅವರ ಹೆಂಡತಿಯೇ ಚಕಾರ ಎತ್ತದೇ ಅವರ ಜನಸೇವೆಗೆ ಸಹಮತ ವ್ಯಕ್ತಪಡಿಸಿದ ಹೇಳಿಕೆ ಪ್ರಕಟವಾಯಿತು..ಇದಕ್ಕೆಲ್ಲಾ ತಲೆಕೆಡಿಸದ ಮೋದೀಜಿಯವರು ತಾನೊಬ್ಬ ಪ್ರಧಾನ ಸೇವಕರೆಂದರು.

  ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗಲೇ ಗುಜರಾತಿನ ಆಧುನೀಕರಣ ಮಾಡಿ ಅಭಿವೃದ್ಧಿಯ ಹರಿಕಾರ ಎಂದೆನಿಸಿದರು..ಪ್ರಕೃತ ಭಾರತದ ಖ್ಯಾತಿಯನ್ನು ವಿಶ್ವದಲ್ಲೇ ಪ್ರಚುರಪಡಿಸಿದ ಓರ್ವ ಪವಾಡ ಪುರುಷರೇ ಸರಿ..ಖಂಡಿತವಾಗಿ ನಮ್ಮ ದೇಶ ವಿಶ್ವ ಗುರು ಆಗುವುದರಲ್ಲಿ ಸಂಶಯವಿಲ್ಲ.
  2014ರಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಪಕ್ಷದ ಪ್ರಧಾನ ಮಂತ್ರಿಗಳಾದ ಇವರು ಮತ್ತೆ ಎರಡನೇ ಅವಧಿಗೆ 2019ರಲ್ಲಿ ಅತ್ಯಂತ ಬಹುಮತದಿಂದ ಆಯ್ಕೆಗೊಂಡ ಬಿಜೆಪಿ ಪಕ್ಷದ ಅತ್ಯಂತ ಪ್ರಭಾವಶಾಲಿ ನಾಯಕರಾಗಿ ಹೊರಹೊಮ್ಮಿದ ಪ್ರಧಾನ ಮಂತ್ರಿಗಳು. ಇಡೀ ವಿಶ್ವವೇ ಮೆಚ್ಚಿದ ಬೆಚ್ಚಿದ ವಿಶ್ವಕ್ಕೆ ಮಾರ್ಗದರ್ಶನಕರು ನಮ್ಮ ಪ್ರಧಾನಿ ನಮ್ಮ ಹೆಮ್ಮೆ.

  ಜನಧನ್ ಯೋಜನಾ,ಮೇಕ್ ಇಂಡಿಯಾ.. ಕರೆಸ್ಸಿ ಡಿಮೋನಿಟೈಜೇಷನ್ ಆವಾಜ್ ಯೋಜನಾ,ಪರಿಯಾವರನ್ ಯೋಜನಾ ಸ್ವಚ್ಛ ಭಾರತ, ಸ್ಕಿಲ್ ಡೆವಲಪ್ಮೆಂಟ್ ಒಂದೋ ಎರಡೋ..!? ಆಡು ಮುಟ್ಟದ ಸೊಪ್ಪಿಲ್ಲ ಅಂತಾರೆ ಹಾಗೇ ಎಲ್ಲಾ ಕ್ಷೇತ್ರಗಳಲ್ಲಿ ಅವರ ಸಾಧನೆ ಇದೆ.
  ಅವರ ಈ ಸಾಧನೆಗೆ ದೊಡ್ಡ ಸಲಾಮ್..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!