Tuesday, December 6, 2022

Latest Posts

ದೇಶದಲ್ಲಿ ಸಂಸ್ಕೃತ ಮಾತನಾಡುವವರ ಸಂಖ್ಯೆಯೆಷ್ಟಿದೆ ? ಕೇಂದ್ರ ಗೃಹ ಸಚಿವಾಲಯ ಹೊರ ಹಾಕಿರೋ ಮಾಹಿತಿಯಿದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸಂಸ್ಕೃತ ದೇಶದ ಪ್ರಾಚೀನ ಬಾಷೆಗಳಲ್ಲೊಂದು, ವೇದಗಳ ಕಾಲದ ಇತಿಹಾಸ ಹೊಂದಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಈ ಸಂಸ್ಕೃತವನ್ನು ದೇಶದಲದಲಿ ಮಾತನಾಡುತ್ತಿರುವವರ ಸಂಖ್ಯೆಯೆಷ್ಟಿದೆ ಎಂಬುದು ತಿಳಿದಿದೆಯೇ? ಕೇಂದ್ರ ಗ್ರಹ ಸಚಿವಾಲಯವು ಈ ಕುರಿತು ಮಾಹಿತಿಯನ್ನು ಹೊರಹಾಕಿದ್ದು ಸಂಸ್ಕೃತ ಮಾತನಾಡುವವರ ಸಂಖ್ಯೆ ಕೇವಲ 24,821ರಷ್ಟಿದೆ ಎಂದು ಬಹಿರಂಗ ಪಡಿಸಿದೆ.

ಕೇಂದ್ರ ಗೃಹ ಸಚಿವಾಲಯದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಯ ಭಾಷಾ ವಿಭಾಗವು ಆಗ್ರಾ ಮೂಲದ ಶಸ್ತ್ರಚಿಕಿತ್ಸಕ ಮತ್ತು ಸಾಮಾಜಿಕ ಕಾರ್ಯಕರ್ತ ಡಾ. ದೇವಶಿಶ್ ಭಟ್ಟಾಚಾರ್ಯ ಅವರು ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಉತ್ತರವಾಗಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಡಾ.ಭಟ್ಟಾಚಾರ್ಯ ಅವರು ಪಡೆದ ಮಾಹಿತಿಯ ಪ್ರಕಾರ, 2011 ರ ಜನಗಣತಿಯ ಪ್ರಕಾರ, ಭಾರತೀಯ ಜನಸಂಖ್ಯೆಯ ಶೇಕಡಾ 0.002 ರಷ್ಟು ಜನರು ಮಾತ್ರ ಸಂಸ್ಕೃತವನ್ನು ಮಾತನಾಡುತ್ತಾರೆ.

“ಸಂಸ್ಕೃತವನ್ನು ಸಂವಿಧಾನದಲ್ಲಿ ಅಲ್ಪಸಂಖ್ಯಾತ ಭಾಷೆಯಾಗಿ ಪಟ್ಟಿ ಮಾಡಲಾಗಿಲ್ಲ, ಆದರೆ ದೇಶದ 22 ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. 2010 ರಲ್ಲಿ, ಉತ್ತರಾಖಂಡವು ಸಂಸ್ಕೃತವನ್ನು ತನ್ನ ಎರಡನೇ ಅಧಿಕೃತ ಭಾಷೆ ಎಂದು ಪಟ್ಟಿ ಮಾಡಿದ ಭಾರತದ ಮೊದಲ ರಾಜ್ಯವಾಯಿತು. ಆದಾಗ್ಯೂ, ಇದನ್ನು ಯಾರೂ ಮಾತನಾಡುವುದಿಲ್ಲ, ಆದರೆ ಸಂಸ್ಕೃತ ಸೇರಿದಂತೆ ಹಲವಾರು ಭಾಷೆಗಳ ಮಿಶ್ರಣವಾದ ಹಿಂದಿಯನ್ನು ಹಲವಾರು ಕೋಟಿ ಭಾರತೀಯರು ಮಾತನಾಡುತ್ತಾರೆ” ಎಂದು ಡಾ.ಭಟ್ಟಾಚಾರ್ಯ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕೇಂದ್ರೀಯ ಹಿಂದಿ ಸಂಸ್ಥಾನದ (ಕೆಎಚ್‌ಎಸ್) ಭಾಷಾಶಾಸ್ತ್ರಜ್ಞೆ ಡಾ.ಸಪ್ನಾ ಈ ಕುರಿತು ಪ್ರತಿಕ್ರಿಯಿಸಿದ್ದು ಸಂಸ್ಕೃತ ಮಾತ್ರವಲ್ಲ, ಕೆಎಚ್‌ಎಸ್ ಬ್ರಜ್ ಭಾಷಾ, ಅವಧಿ ಮತ್ತು ಭೋಜ್‌ಪುರಿ ಸೇರಿದಂತೆ 18 ಪ್ರಾದೇಶಿಕ ಭಾಷೆಗಳನ್ನು ಉಳಿಸುವ ಕೆಲಸ ಮಾಡಲಾಗುತ್ತಿದೆ. ಈ ಭಾಷೆಗಳಿಗೆ ನಿಘಂಟುಗಳನ್ನು ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಮೂರು ನಿಘಂಟುಗಳು ಸಿದ್ಧಗೊಂಡಿದ್ದು ಇನ್ನುಳಿದಂತೆ 15 ನಿಘಂಟುಗಳು ತಯಾರಿ ಯ ಹಂತದಲ್ಲಿವೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!