ಜೈವಿಕ ತಂತ್ರಜ್ಞಾನದಲ್ಲಿ ಟಾಪ್-‌10 ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗುವ ಕಾಲ ಬಹಳ ದೂರವೇನಿಲ್ಲ : ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
“ಭಾರತದ ಜೈವಿಕ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿದ್ದು ಜಗತ್ತಿನ ಟಾಪ್‌ 10 ರಾಷ್ಟ್ರಗಳ ಸಾಲಿಒಗೆ ಸೇರುವ ಕಾಲ ಬಹಳ ದೂರವೇನಿಲ್ಲ” ಎಂದು ಪ್ರಧಾನ ಮೋದಿ ಹೇಳಿದ್ದಾರೆ.

ದೆಹಲಿಯಲ್ಲಿ ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (BIRAC) ಆಯೋಜಿಸಿರುವ ʼಬಯೋಟೆಕ್‌ ಸ್ಟಾರ್ಟಪ್‌ ಎಕ್ಸ್‌ ಪೋ-2022ʼನ್ನು ಉದ್ಘಾಟಿಸಿದ ಮೋದಿ “ಕೈಗಾರಿಕಾ ಕ್ಷೇತ್ರದಲ್ಲಿ ಕಳೆದ 8 ವರ್ಷಗಳಲ್ಲಿ ಹಲವು ಅಭಿವೃದ್ಧಿಗಳಾಗಿವೆ. ಕೆಲವೇ ಸಂಖ್ಯೆಯಲ್ಲಿದ್ದ ಸ್ಟಾರ್ಟಪ್‌ಗಳ ಸಂಖ್ಯೆ ಈಗ 70,000 ದಷ್ಟಾಗಿದೆ. ಅವುಗಳಲ್ಲಿ 5,000 ಸ್ಟಾರ್ಟಪ್‌ ಗಳು ಕೇವಲ ಜೈವಿಕ ವಿಜ್ಞಾನಕ್ಕೆ ಸಂಬಂಧಿಸಿರುವುದಾಗಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ 8 ವರ್ಷಗಳಲ್ಲಿ 8 ಪಟ್ಟು ಬೆಳೆದಿದ್ದೇವೆ. 10 ಶತಕೋಟಿ ಡಾಲರ್‌ ಗಳಿಂದ 80 ಶತಕೋಟಿಯಷ್ಟು ಅಭಿವೃದ್ಧಿ ಸಾಧಿಸಲಾಗಿದೆ” ಎಂದರು.

ಭಾರತದ ಯಶಸ್ಸಿಗೆ ಕಾರಣವಾಗಬಲ್ಲ ಐದು ಅಂಶಗಳನ್ನು ಉಲ್ಲೇಖಿಸಿರುವ ಮೋದಿ “ವೈವಿಧ್ಯಮಯ ಜನಸಂಖ್ಯೆ, ವೈವಿಧ್ಯಮಯ ಹವಾಮಾನವಲಯಗಳು, ಪ್ರತಿಭಾವಂತ ಮಾನವ ಬಂಡವಾಳ, ವ್ಯಾಪಾರವನ್ನು ಸುಲಭೀಕರಿಸಿರುವುದು. ನಿರಂತರವಾಗಿ ಹೆಚ್ಚುತ್ತಿರುವ ಜೈವಿಕ ಉತ್ಪನ್ನಗಳ ಬೇಡಿಕೆ ಮುಂತಾದವುಗಳು ಭಾರತವನ್ನು ಜೈವಿಕ ತಂತ್ರಜ್ಞಾನದ ಹಬ್‌ ಆಗಿ ನಿರ್ಮಾಣಮಾಡಲು ಸಹಕಾರಿಯಾಗಿದೆ” ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ಮುಂದಿನ ಎರಡು ದಿನಗಳ ಕಾಲ ನಡೆಯಲಿರುವ ʼಬಯೋಟೆಕ್‌ ಸ್ಟಾರ್ಟಪ್‌ ಎಕ್ಸ್‌ ಪೋ-2022ʼ ವನ್ನ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಇಂಬು ನೀಡಲು ಆಯೋಜಿಸಲಾಗಿದ್ದು ಆತ್ಮ ನಿರ್ಭರ ಭಾರತದ ಕಡೆಗೆ ಜೈವಿಕ ತಂತ್ರಜ್ಞಾನದ ಆವಿಷ್ಕಾರಗಳು ಎಂಬ ವಿಷಯದಡಿಯಲ್ಲಿ ಆಯೋಜನೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!