ಸತತ 5 ನೇ ವಾರವೂ ಏರಿಕೆ ದಾಖಲಿಸಿದೆ ಭಾರತದ ವಿದೇಶೀ ವಿನಿಮಯ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಡಿಸೆಂಬರ್ 9 ರಂದು ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 2.91 ಶತಕೋಟಿ ಡಾಲರ್‌ ಏರಿಕೆಯಾಗಿ USD 564.07 ಶತಕೋಟಿಗೆ ಏರಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂಕಿಅಂಶಗಳು ತೋರಿಸಿವೆ.

ಗಮನಾರ್ಹವಾಗಿ, ಇದು ಭಾರತದ ಹೆಚ್ಚುತ್ತಿರುವ ವಿದೇಶಿ ವಿನಿಮಯ ಸಂಗ್ರಹದಲ್ಲಿ ಸತತ ಐದನೇ ವಾರದ ಏರಿಕೆಯಾಗಿದೆ. ಡಿಸೆಂಬರ್ 2ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶೀ ವಿನಿಮಯ ಮೀಸಲು 561.16 ಶತಕೋಟಿ ಡಾಲರ್‌ ಗಳಷ್ಟಿತ್ತು ಎಂದು ಹಿಂದಿನ ಅಂಕಿಅಂಶಗಳು ತೋರಿಸಿವೆ.

RBI ಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ವಿದೇಶೀ ವಿನಿಮಯ ಸಂಗ್ರಹದ ಅತಿದೊಡ್ಡ ಅಂಶವಾಗಿರುವ ಭಾರತದ ವಿದೇಶಿ ಕರೆನ್ಸಿ ಆಸ್ತಿಯು 3.14 ಶತಕೋಟಿ ಡಾಲರ್‌ ಹೆಚ್ಚಾಗಿ USD 500.12 ಶತಕೋಟಿಗೆ ಏರಿದೆ.

ಆಧರೆ ಇತ್ತೀಚಿನ ವಾರದಲ್ಲಿ ಚಿನ್ನದ ಸಂಗ್ರಹವು USD 296 ಮಿಲಿಯನ್‌ನಿಂದ USD 40.729 ಶತಕೋಟಿಗೆ ಇಳಿದಿದೆ.

2022 ರ ಆರಂಭದಲ್ಲಿ, ಒಟ್ಟಾರೆ ಫಾರೆಕ್ಸ್ ಸಂಗ್ರಹವು USD 633.61 ಬಿಲಿಯನ್ ಆಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!