2024ರಲ್ಲಿ ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನಕ್ಕೆ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

2024ರಲ್ಲಿ ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನ ಯೋಜನೆ ಗಗನಯಾನ 3 ಅನ್ನು ಉಡಾವಣೆ ಮಾಡುವ ನಿರೀಕ್ಷೆಯಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ತಿಳಿಸಿದ್ದಾರೆ.

ಭಾರತ ಸರ್ಕಾರವು 2022ಕ್ಕೆ ಮಾನವ ಬಾಹ್ಯಾಕಾಶಯಾನ ಮಿಷನ್ ಯೋಜಿಸಿದೆ.ಆದ್ರೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಎಲ್ಲವೂ ಅಸ್ತವ್ಯಸ್ತಗೊಂಡಿದೆ. ಇನ್ನು 2022ರಲ್ಲಿ ಮೊದಲ ಮಾನವ ಬಾಹ್ಯಾಕಾಶಯಾನ ಮಿಷನ್ ಅನ್ನು ಪ್ರಾರಂಭಿಸುವ ಗುರಿಯನ್ನ ಸರ್ಕಾರ ಹೊಂದಿದೆ, ಏಕೆಂದರೆ ಈ ವರ್ಷವು ಭಾರತದ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತದೆ. ಗಗನಯಾನ ಕಾರ್ಯಕ್ರಮದ ಮೊದಲ ಪರೀಕ್ಷಾರ್ಥ ಹಾರಾಟವು ಈ ವರ್ಷದ ಕೊನೆಯಲ್ಲಿ ನಡೆಯಲಿದೆ ಎಂದು ಸಿಂಗ್ ಹೇಳಿದ್ದಾರೆ .

ಗಗನಯಾನ ಕಾರ್ಯಕ್ರಮದ ಎರಡು ಪರೀಕ್ಷಾ ಹಾರಾಟಗಳಲ್ಲಿ ಗಗನಯಾನ 1 ಮೊದಲನೆಯದು. ಗಗನಯಾನ 1ರ ಭಾಗವಾಗಿ 2022ರ ಕೊನೆಯಲ್ಲಿ ಬಾಹ್ಯಾಕಾಶಕ್ಕೆ ಮೂವರು ವ್ಯಕ್ತಿಗಳನ್ನ ಸಾಗಿಸುವ ಸಾಮರ್ಥ್ಯವನ್ನು ಹೊಂದಿರುವ ಅನ್ಕ್ರೂವ್ಡ್ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!