ಕೇಂದ್ರ ನೌಕರರಿಗೆ ಸಿಹಿ ಸುದ್ದಿ: ಇಡೀ ಕುಟುಂಬಕ್ಕೆ ‘ತೇಜ್ ಎಕ್ಸ್‌ಪ್ರೆಸ್‌’ನಲ್ಲಿ ಉಚಿತ ಪ್ರಯಾಣ ಅವಕಾಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರ ಸರಕಾರವು 7ನೇ ವೇತನ ಆಯೋಗದ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ ನೀಡಿದ್ದು, ಪ್ರವಾಸ/ತರಬೇತಿ/ವರ್ಗಾವಣೆ/ನಿವೃತ್ತಿ ಸಮಯದಲ್ಲಿ ನೌಕರರಿಗೆ ತೇಜ್ ಎಕ್ಸ್‌ಪ್ರೆಸ್‌ನಲ್ಲಿ ಉಚಿತ ಪ್ರಯಾಣಿಸಲು ಅವಕಾಶ ನೀಡುವುದಾಗಿ ಘೋಷಿಸಿದೆ.

ಅದ್ರಂತೆ, ನಿಮ್ಮ ಮನೆಯ ಯಾವುದೇ ಸದಸ್ಯರು ಸರ್ಕಾರಿ ನೌಕರರಾಗಿದ್ದರೆ, ನೀವು ಸಹ ಇದರ ಪ್ರಯೋಜನವನ್ನ ಪಡೆಯಬಹುದು.
7ನೇ ವೇತನ ಆಯೋಗವು ಸೆಪ್ಟೆಂಬರ್ 12ರಂದು ಹೊರಡಿಸಿದ ಕಚೇರಿ ಜ್ಞಾಪಕ ಪತ್ರದಲ್ಲಿ ಸರ್ಕಾರವು ತನ್ನ ಅನುಮೋದನೆಯನ್ನ ನೀಡಿದೆ. ಉದ್ಯೋಗಿಗಳಿಗೆ ಪ್ರಯಾಣಿಸಲು ಅವಕಾಶ ನೀಡಲು 2017ರಲ್ಲಿ ಕಚೇರಿ ಮೆಮೊರಾಂಡಮ್ ನಿರ್ಧಾರವನ್ನ ತೆಗೆದುಕೊಂಡಿದೆ.

ಅದೇ ಸಮಯದಲ್ಲಿ, ಕೇಂದ್ರ ನೌಕರರು ದೀರ್ಘಾವಧಿಯಿಂದ ತುಟ್ಟಿ ಭತ್ಯೆಗಾಗಿ ಕಾಯುತ್ತಿದ್ದಾರೆ. ಪ್ರಸ್ತುತ ಶೇ.34ರಷ್ಟು ನೌಕರರಿಗೆ ನೀಡಲಾಗಿದ್ದು, ಸರ್ಕಾರ ತುಟ್ಟಿಭತ್ಯೆ ಘೋಷಿಸಿದರೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಭಾರಿ ಮೊತ್ತದ ಲಾಭ ದೊರೆಯಲಿದೆ. ಅಂದರೆ ಉದ್ಯೋಗಿಗಳಿಗೆ ಶೇ.4ರಷ್ಟು ಹೆಚ್ಚಳವಾಗಲಿದೆ. ಅದರ ನಂತರ ಅದು 38% ಆಗುತ್ತದೆ. ಈ ಕುರಿತು ಸರ್ಕಾರ ಈ ತಿಂಗಳ ಕೊನೆಯ ದಿನಾಂಕವನ್ನ ಪ್ರಕಟಿಸುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!