ಜಾಗತಿಕ ಅಡಚಣೆಗಳ ಹೊರತಾಗಿಯೂ 2023ರಲ್ಲಿ ಭಾರತದ ಜಿಡಿಪಿ ಬೆಳವಣಿಗೆಯಲ್ಲಿ ಏರುಗತಿ: ವಿಶ್ವ ಬ್ಯಾಂಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
2023ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಏರುಗತಿಯಲ್ಲಿ ಸಾಗುತ್ತದೆ ಎಂದು ವಿಶ್ವಬ್ಯಾಂಕ್‌ ಹೇಳಿದೆ. ಭಾರತದ ಆರ್ಥಿಕತೆಯು ಜಾಗತಿಕ ಆಘಾತಗಳಿಗೆ ಹೆಚ್ಚಿನ ಸ್ಥಿತಿಸ್ಥಾಪಕತ್ವ ತೋರಿಸುತ್ತಿದೆ ಆದ್ದರಿಂದ ಭಾರತದ ಜಿಡಿಪಿ ಬೆಳವಣಿಗೆಯನ್ನು ವಿಶ್ವಬ್ಯಾಂಕ್‌ ನವೀಕರಿಸಿದ್ದು 2023ಕ್ಕೆ 6.9 ಶೇಕಡಾದಷ್ಟಿರುತ್ತದೆ ಎಂದು ಹೇಳಿದೆ.

ಈ ವರ್ಷದ ಅಕ್ಟೋಬರ್‌ನಲ್ಲಿ ವಿಶ್ವಬ್ಯಾಂಕ್‌ ಭಾರತದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು 7.5% ರಿಂದ 6.5% ಕ್ಕೆ ಕಡಿತಗೊಳಿಸಿತ್ತು. ಪ್ರಸ್ತುತ ತನ್ನ ಇಂಡಿಯಾ ಡೆವಲಪ್‌ಮೆಂಟ್ ಅಪ್‌ಡೇಟ್‌ನಲ್ಲಿ, ಜಾಗತಿಕ ಆಘಾತಗಳಿಗೆ ಭಾರತೀಯ ಆರ್ಥಿಕತೆಯ ಹೆಚ್ಚಿನ ಸ್ಥಿತಿಸ್ಥಾಪಕತ್ವ ಮತ್ತು ನಿರೀಕ್ಷಿತಕ್ಕಿಂತ ಉತ್ತಮವಾದ ಎರಡನೇ ತ್ರೈಮಾಸಿಕ ಸಂಖ್ಯೆಗಳಿಂದ ಪರಿಷ್ಕರಣೆಯಾಗಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.

ಹಿಂದಿನ 2021-22 ಹಣಕಾಸು ವರ್ಷದಲ್ಲಿ 8.7 ಶೇ, ಬೆಳೆದ ಭಾರತದ ಒಟ್ಟು ಆಂತರಿಕ ಉತ್ಪನ್ನ (GDP), ಜುಲೈ-ಸೆಪ್ಟೆಂಬರ್ 2022-23 ರಲ್ಲಿ 6.3 ಶೇ. ವಿಸ್ತರಿಸಿದೆ. ಭಾರತ ಸರ್ಕಾರವು 2022-23ರಲ್ಲಿ GDP ಯ 6.4% ವಿತ್ತೀಯ ಕೊರತೆಯ ಗುರಿಯನ್ನು ಪೂರೈಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರವು 7.1% ಎಂದು ನಿರೀಕ್ಷಿಸಲಾಗಿದೆ ಎಂದು ವಿಶ್ವಬ್ಯಾಂಕ್‌ ಉಲ್ಲೇಖಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!