ಉತ್ತರ ಕೊರಿಯಾ ಉದ್ಧಟತನ: 90 ಸುತ್ತು ಫಿರಂಗಿ ಶೆಲ್‌ಗಳ ಸುರಿಮಳೆ, ತೀವ್ರ ಉದ್ವಿಗ್ನತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಕೊರಿಯಾ ಸೇನಾ ಸಮರಾಭ್ಯಾಸ ನಡೆಸುತ್ತಿದ್ದಂತೆ ಉತ್ತರ ಕೊರಿಯಾ ಆ ದೇಶದತ್ತ 90 ಸುತ್ತು ಫಿರಂಗಿ ಹಾರಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಉತ್ತರ ಕೊರಿಯಾ ಸತತ ಎರಡನೇ ದಿನ ದಕ್ಷಿಣ ಕೊರಿಯಾದ ನೀರಿನಲ್ಲಿ ಗುಂಡು ಹಾರಿಸಿದ ಬಳಿಕ ಉಭಯ ದೇಶಗಳ ನಡುವೆ ಮತ್ತೆ ಉದ್ವಿಗ್ನತೆ ಉಂಟಾಗಿದೆ.

ಉಭಯ ದೇಶಗಳ ನಡುವೆ ಪರಿಸ್ಥಿತಿ ಹದಗೆಡುತ್ತಿದೆ. ದಕ್ಷಿಣ ಕೊರಿಯಾದ ಮಿಲಿಟರಿ ಅಧಿಕಾರಿಗಳು ಉತ್ತರ ಕೊರಿಯಾದ 90 ಸುತ್ತುಗಳ ಫಿರಂಗಿ ಗುಂಡಿನ ದಾಳಿಯನ್ನು ಪತ್ತೆಹಚ್ಚಿದ್ದಾರೆ. ಉತ್ತರ ಕೊರಿಯಾ ಕೊಸಾಂಗ್‌ನ ಪೂರ್ವ ಕರಾವಳಿ ಪ್ರದೇಶಕ್ಕೆ ಹಾಗೂ ಕುಮ್ಕಾಂಗ್ ಪಟ್ಟಣದ ಕಡೆಗೆ ಗುಂಡು ಹಾರಿಸಿದೆ.  2018 ರಲ್ಲಿ, ಕೊರಿಯನ್ ಪೆನಿನ್ಸುಲಾದಲ್ಲಿ ಸ್ಥಿರತೆಗಾಗಿ ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿದವು. ಇದನ್ನು ಉಲ್ಲಂಘಿಸಿ ಉತ್ತರ ಕೊರಿಯಾ ಗುಂಡು ಹಾರಿಸಿದೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ. ದಕ್ಷಿಣ ಕೊರಿಯಾದ ಕ್ರಮಗಳ ವಿರುದ್ಧ ಎಚ್ಚರಿಕೆಯಾಗಿ ಗುಂಡು ಹಾರಿಸಲಾಗುತ್ತಿದೆ ಎಂದು ಉತ್ತರ ಕೊರಿಯಾ ಹೇಳಿದೆ.

ಪ್ರಸ್ತುತ, ದಕ್ಷಿಣ ಕೊರಿಯಾದ ಸೇನೆಯು ಚೆರ್ವಾನ್ ಪ್ರದೇಶದಲ್ಲಿ ಬಹು ರಾಕೆಟ್ ಉಡಾವಣಾ ವ್ಯವಸ್ಥೆಗಳೊಂದಿಗೆ ಸಮರಾಭ್ಯಾಸ ನಡೆಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!