ಇಂಡಿಯಾ’ಸ್ ಲಾಸ್ಟ್ ಟೀ ಶಾಪ್ ಗೂ ಬಂತು ಡಿಜಿಟಲ್ ಪಾವತಿ: ಜೈ ಹೋ ಎಂದ ಆನಂದ್ ಮಹೀಂದ್ರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚಾಗುತ್ತಿದ್ದು, ದೊಡ್ಡ ದೊಡ್ಡ ಮಾಲ್ ನಿಂದ ಹಿಡಿದು ಈಗ ತಳ್ಳುವ ಗಾಡಿಯಲ್ಲೂ ಇತ್ತೀಚಿನ ದಿನಗಳಲ್ಲಿ UPI ನಂತಹ ಡಿಜಿಟಲ್ ಪಾವತಿ ಆಯ್ಕೆಗಳನ್ನು ಹೊಂದಿವೆ.

ಇದೀಗ ಭಾರತ-ಚೀನಾ ಗಡಿಯ ಕೊನೆಯ ಟೀ ಸ್ಟಾಲ್ ನಲ್ಲೂ ಡಿಜಿಟಲ್ ಪಾವತಿ ಶುರುವಾಗಿದೆ.

ಈ ಕುರಿತು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದು, ‘ಇಂಡಿಯಾಸ್ ಲಾಸ್ಟ್ ಟೀ ಶಾಪ್’ ಯುಪಿಐ ಪಾವತಿಗಳನ್ನು ಸ್ವೀಕರಿಸುತ್ತದೆ, ‘ಜೈ ಹೋ’ ಎಂದು ಬರೆದಿದ್ದಾರೆ.

ಭಾರತ- ಟಿಬೆಟ್ ಗಡಿಯಲ್ಲಿ ಉತ್ತರಾಖಂಡದಲ್ಲಿ ದೇಶದ ಕೊನೆಯ ಗ್ರಾಮವಾದ ಮಾನಾ ದೊಡ್ಡ ಪ್ರವಾಸಿ ಕೇಂದ್ರವಾಗಿದೆ. ಪ್ರತಿವರ್ಷವೂ ಸಹಸ್ರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲೊಂದು ಚಹಾ ಅಂಗಡಿಯಿದ್ದು, ಇದನ್ನು ಭಾರತದ ಕೊನೆಯ ಚಹಾ ಅಂಗಡಿ ಎಂದೇ ಹೇಳಲಾಗುತ್ತದೆ.

ಇಲ್ಲಿ ಪ್ರವಾಸಿಗರಿಗೆ ಬಿಸಿಬಿಸಿಯಾದ, ರುಚಿಕರಾದ ತುಳಸಿ ಚಹಾವ ಸಿಗುತ್ತದೆ. ಇಷ್ಟು ವರ್ಷಗಳವರೆಗೆ ಇಲ್ಲಿ ಕೇವಲ ಹಣವನ್ನು ಪಾವತಿಸುವ ಮೂಲಕ ಮಾತ್ರ ಟೀ ಕುಡಿಯಬೇಕಿತ್ತು. ಆದರೆ ಇದೀಗ ಡಿಜಿಟಲ್ ಪೇಮೆಂಟ್ ಆಪ್ಶನ್ ಲಭ್ಯವಾಗಿದ್ದು ಈ ಕುರಿತು ‘ಇಂಡಿಯಾಸ್ ಲಾಸ್ಟ್ ಟೀ ಶಾಪ್’ ಯುಪಿಐ ಪಾವತಿಗಳನ್ನು ಸ್ವೀಕರಿಸುತ್ತದೆ, ‘ಜೈ ಹೋ’ ಎಂದು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

ಇದರ ಫೋಟೋವನ್ನು ಮಹೀಂದ್ರಾ ರಿಟ್ವೀಟ್ ಮಾಡಿದ್ದಾರೆ. ‘ಒಂದು ಚಿತ್ರವು ಸಾವಿರ ಪದಗಳಿಗೆ ಯೋಗ್ಯವಾಗಿದೆ. ಇದು ಭಾರತದ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯ ವ್ಯಾಪ್ತಿ ಮತ್ತು ಪ್ರಮಾಣವನ್ನು ಸೆರೆಹಿಡಿಯುತ್ತದೆ. ಜೈ ಹೋ’ ಎಂಬ ಶೀರ್ಷಿಕೆಯನ್ನು ಅವರು ನೀಡಿದ್ದು, ಇದೀಗ ವೈರಲ್​ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!