ಮಗನನ್ನು ಎತ್ತಿಕೊಂಡೇ ಭಾಷಣ ಮಾಡಿದ ಜಿಲ್ಲಾಧಿಕಾರಿ: ಶುರುವಾಯಿತು ಪರ-ವಿರೋಧ ಚರ್ಚೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಹಿಳಾ ಜಿಲ್ಲಾಧಿಕಾರಿಯೊಬ್ಬರು ತಮ್ಮ ಮೂರೂವರೆ ವರ್ಷದ ಮಗನನ್ನು ಎತ್ತಿಕೊಂಡು ಭಾಷಣ ಮಾಡಿದ್ದು, ಇದೀಗ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.

ಕೇರಳದ ಪತ್ತನಂತಿಟ್ಟ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಐಎಎಸ್ ಅಧಿಕಾರಿ ದಿವ್ಯಾ ಎಸ್. ಅಯ್ಯರ್ ಅವರು ಕಾರ್ಯಕ್ರಮದ ವೇದಿಕೆ ಮೇಲಿದ್ದಾಗ ಮೂರೂವರೆ ವರ್ಷದ ಮಗು ತಾಯಿಯ ಮಡಿಲಲ್ಲಿ ಆಟವಾಡುತ್ತಿತ್ತು. ನಂತರ ಜಿಲ್ಲಾಧಿಕಾರಿ ಭಾಷಣ ಮಾಡುವಾಗಲೂ ಮಗುವನ್ನು ಎತ್ತಿಕೊಂಡೇ ಭಾಷಣಕ್ಕೆ ನಿಂತರು. ಆಗಲೂ ಮಗು ತನ್ನ ಚಿಣ್ಣಾಟ ಮುಂದುವರೆಸಿತ್ತು. ಆದ್ರೆ ಇದೀಗ ಇದು ವಿವಾದಕ್ಕೆ ದಾರಿ ಮಾಡಿದೆ.

ಜಿಲ್ಲಾಧಿಕಾರಿಯಾದವರು ಈ ರೀತಿ ಮಗುವನ್ನು ಎತ್ತಿಕೊಂಡು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿ ಆಗಬಹುದೇ ಅನ್ನೋದು ಹಲವಾರುಪ್ರಶ್ನಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಯ ಪರವಾಗಿ ಇದ್ದವರು ಮಾತ್ರ ಅದರಲ್ಲೇನು ತಪ್ಪು ಎಂದು ಮರು ಪ್ರಶ್ನೆಯನ್ನು ಹಾಕಿದ್ದಾರೆ.

ಮಹಿಳಾ ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಅವರು ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ ಸಿನೆಮಾ ಉತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹೊರತು ಸರಕಾರಿ ಕ್ರಾಯಕ್ರಮವಲ್ಲ. ಆದ್ರೆ ಜಿಲ್ಲಾಧಿಕಾರಿಯಂಥಾ ದೊಡ್ಡ ಹುದ್ದೆಯಲ್ಲಿ ಇರುವವರು ಸಭಾ ಮರ್ಯಾದೆಯನ್ನು ಗಮನದಲ್ಲಿ ಇಟ್ಟುಕೊಂಡು ವರ್ತಿಸಬೇಕು ಅನ್ನೋದು ವಿರೋಧಿಗಳ ವಾದ.

ಆದ್ರೆ ಅಯ್ಯರ್ ಅವರ ಪತಿ ಸೇರಿದಂತೆ ಹಲವರು ಜಿಲ್ಲಾಧಿಕಾರಿ ಪರ ನಿಂತಿದ್ದಾರೆ. ಮಹಿಳೆ ಹಲವು ಪಾತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಾಳೆ. ತಾಯಿಯ ಪಾತ್ರವನ್ನೂ ವಹಿಸುವ ಮಹಿಳೆ ತನ್ನ ಮಗುವನ್ನು ಕಾರ್ಯಕ್ರಮಕ್ಕೆ ಕರೆತಂದರೆ ಏನು ತಪ್ಪು? ಆ ಕ್ಷಣಗಳನ್ನು ಆನಂದಿಸಿದರೆ ಏನು ತಪ್ಪು ಅನ್ನೋದು ವಾದಿಸಿದ್ದಾರೆ.

ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಅವರು 2018ರ ವಿಶ್ವ ಸಂಸ್ಥೆ ಮಹಾ ಅಧಿವೇಶನಕ್ಕೆ ತಮ್ಮ ಮೂರು ತಿಂಗಳ ಮಗಳನ್ನು ಕರೆದುಕೊಂಡು ಹೋಗಿದ್ದರು. ಇದು ಇತಿಹಾಸ ನಿರ್ಮಿಸಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಘಟನೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು. ಜೆಸಿಂಡಾ ಆರ್ಡೆರ್ನ್ ಅವರು ವಿಶ್ವ ಸಂಸ್ಥೆಯ ಮಹಾಧಿವೇಶನದಲ್ಲಿ ಭಾಷಣ ಮಾಡುವ ವೇಳೆ ಜೆಸಿಂಡಾ ಅವರ ಸಂಗಾತಿ ಕ್ಲಾರ್ಕೆ ಗೇಫೋರ್ಡ್‌ ಅವರು ಮಗುವನ್ನು ತಮ್ಮ ತೊಡೆಯ ಮೇಲೆ ಕೂಡಿಸಿಕೊಂಡಿದ್ದರು. ಈ ಸನ್ನಿವೇಶದ ಫೋಟೋಗಳು ವಿಶ್ವಾದ್ಯಂತ ವೈರಲ್ ಆಗಿತ್ತು. ಹಾಗಾಗಿ ಜಿಲ್ಲಾಧಿಕಾರಿಯೊಬ್ಬರು ತಮ್ಮ ಮಗುವನ್ನು ಎತ್ತಿಕೊಂಡು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ್ದು ತಪ್ಪೇನು ಎಂದು ಮಹಿಳಾ ಪರ ಚಿಂತಕರು ಪ್ರಶ್ನಿಸುತ್ತಿದ್ಧಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!