ಭದ್ರತೆ ಪಡೆಯಿಂದ ಮೋಸ್ಟ್ ವಾಂಟೆಡ್ ಉಗ್ರ ಸಲೀಂ ಪರಾರೆಯ ಸಂಹಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಕಾಶ್ಮೀರದ ಶ್ರೀನಗರದ ಹರ್ವಾನ್ ಪ್ರದೇಶದಲ್ಲಿ ಸೋಮವಾರ ನಡೆದ ಎನ್ಕೌಂಟರ್ ನಲ್ಲಿ ಭಾರತೀಯ ಭದ್ರತಾ ಪಡೆ ಲಷ್ಕರ್-ಎ-ತೊಯ್ಬಾ (LET) ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರಗಾಮಿಯನ್ನು ಹತ್ಯೆ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಕಾಶ್ಮೀರ ಪೊಲೀಸ್ ವಲಯ, ನಿಷೇಧಿತ ಉಗ್ರ ಸಂಘಟನೆ ಎಲ್‌ಇಟಿಯ ಮೋಸ್ಟ್ ವಾಂಟೆಡ್ ಉಗ್ರ ಸಲೀಂ ಪರಾರೆಯನ್ನು ಎನ್‌ಕೌಂಟರ್‌ ಮಾಡಲಾಗಿದೆ ಎಂದಿದ್ದಾರೆ.
ಈತ 2017-18ರಲ್ಲಿ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಜಿನ್ ಪ್ರದೇಶದಲ್ಲಿ ಕೆಲವು ನಾಗರಿಕರ ಶಿರಚ್ಛೇದದೊಂದಿಗೆ ಭಯೋತ್ಪಾದನಾ ಅಲೆಯನ್ನು ಹರಡಿದ್ದನು. ಈತನನ್ನು ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೋಸ್ಟ್ ವಾಂಟೆಡ್ ಉಗ್ರ ಎಂದು ಘೋಷಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!