September 27, 2026
Sunday, September 27, 2026
spot_img

ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ ಭಾರತದ ಹೊಸ ಹೆಜ್ಜೆ: ಜಪಾನ್ ಜೊತೆ ಮಹತ್ವದ ಒಪ್ಪಂದ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಸಿರು ಇಂಧನ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಜಪಾನ್‌ನ ಪ್ರಮುಖ ಕಂಪನಿಗಳೊಂದಿಗೆ ಹಸಿರು ಅಮೋನಿಯಾ ಹಾಗೂ ಹಸಿರು ಮೆಥನಾಲ್ ಪೂರೈಕೆಗೆ ದೀರ್ಘಾವಧಿಯ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಿಂದ ಜಾಗತಿಕ ಹಸಿರು ಇಂಧನ ಮಾರುಕಟ್ಟೆಯಲ್ಲಿ ಭಾರತದ ಸ್ಥಾನ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ.

ದೀರ್ಘಾವಧಿಯ ಪೂರೈಕೆ ಒಪ್ಪಂದ

ದೆಹಲಿಯ ಅಟಲ್ ಅಕ್ಷಯ್ ಉರ್ಜಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಮ್ಮುಖದಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಜಪಾನ್‌ನ IHI ಕಾರ್ಪೊರೇಷನ್‌ಗೆ ವರ್ಷಕ್ಕೆ 4.05 ಲಕ್ಷ ಟನ್ ಹಸಿರು ಅಮೋನಿಯಾ ಪೂರೈಕೆಯಾಗಲಿದ್ದು, ಎಸಿಎಂಇ ಕ್ಲೀನ್‌ಟೆಕ್ ಸಂಸ್ಥೆ ಮಿತ್ಸುಬಿಷಿ ಗ್ಯಾಸ್ ಕೆಮಿಕಲ್ ಕಂಪನಿಗೆ ವರ್ಷಕ್ಕೆ 1 ಲಕ್ಷ ಟನ್ ಹಸಿರು ಮೆಥನಾಲ್ ಪೂರೈಸಲು 10 ವರ್ಷಗಳ ಒಪ್ಪಂದ ಮಾಡಿಕೊಂಡಿದೆ.

ಇದನ್ನೂ ಓದಿ:

ಹಸಿರು ಹೈಡ್ರೋಜನ್ ಮಿಷನ್‌ಗೆ ಮತ್ತಷ್ಟು ಬಲ

ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಹಾಗೂ SIGHT ಯೋಜನೆಯಡಿ ಉತ್ಪಾದನೆಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ಎಸಿಎಂಇ ಸಂಸ್ಥೆಗೆ ವಾರ್ಷಿಕ 3.70 ಲಕ್ಷ ಟನ್ ಉತ್ಪಾದನಾ ಸಾಮರ್ಥ್ಯ ಅಭಿವೃದ್ಧಿಪಡಿಸುವ ಗುರಿ ನೀಡಲಾಗಿದ್ದು, ಈ ಯೋಜನೆಯೇ ಅಂತಾರಾಷ್ಟ್ರೀಯ ರಫ್ತು ಒಪ್ಪಂದಗಳಿಗೆ ಅಡಿಪಾಯವಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಬಲ

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಲ್ಹಾದ ಜೋಶಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಸಿರು ಇಂಧನ ಕ್ಷೇತ್ರ ವೇಗವಾಗಿ ಬೆಳೆಯುತ್ತಿದ್ದು, ವಿದೇಶಿ ಹೂಡಿಕೆ ಹಾಗೂ ಜಾಗತಿಕ ಸಹಭಾಗಿತ್ವ ಹೆಚ್ಚುತ್ತಿದೆ ಎಂದು ಹೇಳಿದರು. ಜಪಾನ್ ಸರ್ಕಾರದ ಪ್ರತಿನಿಧಿಗಳು ಕೂಡ ಈ ಒಪ್ಪಂದವು ಭಾರತ-ಜಪಾನ್ ಶುದ್ಧ ಇಂಧನ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.

Must Read