ASIAN GAMES 2023 | ಭಾರತದ ನಾನ್‌ಸ್ಟಾಪ್ ಪದಕ ಬೇಟೆ, 10 ಮೀಟರ್ ಏರ್‌ಪಿಸ್ತೂಲ್‌ನಲ್ಲಿ ಪಲಕ್‌ಗೆ ಚಿನ್ನ, ಇಶಾಗೆ ಬೆಳ್ಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ.

10 ಮೀಟರ್ ಏರ್‌ಪಿಸ್ತೂಲ್ ವೈಯಕ್ತಿಕ ಫೈನಲ್ ಸ್ಪರ್ಧೆಯಲ್ಲಿ ಭಾರತದ ಪಲಕ್ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಇಶಾ ಸಿಂಗ್ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ.

18 ವರ್ಷದ ಪಲಕ್ 41.2 ಗೆಲುವಿನ ಸ್ಕೋರ್‌ನೊಂದಿಗೆ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಹ್ಯಾಂಗ್‌ಝೌನಲ್ಲಿ ಭಾರತಕ್ಕೆ ಸಿಕ್ಕ ಎಂಟನೇ ಚಿನ್ನ ಇದಾಗಿದೆ.

ಸಾಕೇತ್ ಮೈನೇನಿ ಮತ್ತು ರಾಮ್‌ಕುಮಾರ್ ರಾಮನಾಥನ್ ಅವರು ಏಷ್ಯನ್ ಗೇಮ್ಸ್ 2023ರ ಟೆನಿಸ್ ಪುರುಷರ ಡಬಲ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!