ಅಂಡರ್‌-19 ಕ್ರಿಕೆಟ್‌ ವಿಶ್ವಕಪ್: ಬರೋಬ್ಬರಿ 5 ಸಿಕ್ಸ್ ಸಿಡಿಸಿ ಅಮೋಘ ಪ್ರದರ್ಶನ ನೀಡಿದ ರಾಜವರ್ಧನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವೆಸ್ಟ್‌ ಇಂಡೀಸ್‌ ನಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್‌- 19 ವಿಶ್ವ ಕಪ್‌ ನಲ್ಲಿ ಭಾರತ ತಂಡ ಭರ್ಜರಿ ಆಟ ಪ್ರದರ್ಶಿಸುತ್ತಿದೆ.
ಐರ್ಲೆಂಡ್‌ ವಿರುದ್ಧದ ಭಾರತದ ತಂಡ ಬರೋಬ್ಬರಿ 174 ರನ್‌ ಗಳ ಅಮೋಘ ಗೆಲುವು ಸಾಧಿಸಿದೆ. ಅದ್ಭುತ ಪ್ರದರ್ಶನ ನೀಡಿದ ಭಾರತದ ಅಂಡರ್‌- 19 ಆಟಗಾರರು ಎರಡನೇ ಪಂದ್ಯದಲ್ಲೂ ಜಯ ಗಳಿಸುವ ಮೂಲಕ ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ.
ಅಷ್ಟೆ ಅಲ್ಲಾ, ತಂಡದ ಆಟಗಾರ ರಾಜವರ್ಧನ್‌ ಹಂಗರ್‌ ಗೇಕರ್‌ ಅವರ ಭರ್ಜರಿ ಬ್ಯಾಟಿಂಗ್‌ ನಿಂದ ಭಾರತ ತಂಡ 300ರ ಗಡಿ ದಾಟಲು ಸಾಧ್ಯವಾಯಿತು.
ಸತತ 3 ಸಿಕ್ಸರ್‌ ಸಿಡಿಸುವ ಮೂಲಕ ಯಶಸ್ವಿ ಆಟ ಪ್ರದರ್ಶಿಸಿದರು. ರಘುವಂಶಿ ಹಾಗೂ ಹರ್ನೂರ್ ಸಿಂಗ್‌ ಜೊತೆಯಾಟದಲ್ಲಿ 164 ರನ್‌ ಗಳಿಸಿಕೊಟ್ಟರು. ಇನ್ನು ಕೊನೆಯಲ್ಲಿ ಬಂದ ರಾಜ್‌ ವರ್ಧನ್ 17 ಎಸೆತಗಳಲ್ಲಿ 1 ಬೌಂಡರಿ ಹಾಗೂ 5 ಸಿಕ್ಸ್‌ ಸಿಡಿಸುವ ಮೂಲಕ ಐರ್ಲೆಂಡ್‌ ಬೌಲರ್‌ ಗಳ ಬೆವರಿಳಿಸಿದರು. ಭಾರತ ತನ್ನ ಮುಂದಿನ ಪಂದ್ಯವನ್ನು ಜ.22 ಶನಿವಾರ ಉಗಾಂಡ ವಿರುದ್ಧ ಆಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!